ಬದಾಮಿಯಿಂದ ನಿಲ್ಲಲ್ಲ ಎಂಬ ಸುಳಿವು ಕೊಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ

ಬದಾಮಿಯಿಂದ ನಿಲ್ಲಲ್ಲ ಎಂಬ ಸುಳಿವು ಕೊಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಳಗಾವಿ : ವಿಪಕ್ಷ ನಾಯಕ ಸಿದ್ದರಾಮಯ್ಯ ಬದಾಮಿಯಿಂದ ನಿಲ್ಲಲ್ಲ ಎಂಬ ಸುಳಿವು ಕೊಟ್ಟಿದ್ಧಾರೆ.

ಬೆಳಗಾವಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ನನಗೆ ಬದಾಮಿಗೆ ಸಮಯ ಕೊಡಲು ಆಗ್ತಿಲ್ಲ, ಕನಿಷ್ಟ ಎರಡು ವಾರಕ್ಕೂ ಬಂದು ಹೋಗಲು ಆಗ್ತಿಲ್ಲ, ಹೀಗಾಗಿ ನಾನೇ ಹಿಂದೆ-ಮುಂದೆ ನೋಡ್ತಿದ್ದೇನೆ.

ಬದಾಮಿಯಲ್ಲೇ ನಿಲ್ಲಿ ಅಂತಾ ಒತ್ತಡ ಹೆಚ್ಚಾಗುತ್ತಿದೆ. ನನ್ನ ಮಗ ವರುಣಾಗೇ ಬಂದುಬಿಡಿ ಅಂತಿದ್ದಾನೆ, ಕೋಲಾರಕ್ಕೆ ಬನ್ನಿ ಅಂತಾ ಕೆಲವರು ಕರೆಯುತ್ತಿದ್ದಾರೆ. ಜಮೀರ್​​​ ಚಾಮರಾಜಪೇಟೆಗೆ ಬನ್ನಿ ಅಂತಿದ್ದಾನೆ. ನಾನು ಯಾವುದು ಅನ್ನೋ ಆಯ್ಕೆ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ.