ಪ್ರಧಾನಿ ಮೋದಿ 100 ತಲೆ ರಾವಣನಂತೆ"
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಅವರನ್ನು ರಾವಣ ಎಂದು ಕರೆದಿದ್ದಾರೆ. ಅವರು ಗುಜರಾತ್ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ರಾವಣನಂತೆ 100 ತಲೆ ಹೊಂದಿದ್ದೀರಾ? ಎಂದು ಹೇಳಿದ್ದಾರೆ. ಇದೀಗ ಈ ಮಾತು ರಾಜಕೀಯ ಗದ್ದಲವನ್ನು ಸೃಷ್ಟಿಸಿದೆ. ಖರ್ಗೆ ಅವರಿಗೆ ಈ ಮಾತು ಶೋಭೆ ತರುವುದಿಲ್ಲ, ಅವರು ಗುಜರಾತ್‌ನ ಮಗನನ್ನು ಪದೇ ಪದೇ ಅವಮಾನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಖರ್ಗೆ ಅವರು ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗೆ ಮುನ್ನ ಅಹಮದಾಬಾದ್‌ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ.