ಪ್ರಧಾನಿ ಮೋದಿ ಧರಿಸಿದ ಉಡುಪಿನ ಬಗ್ಗೆ ಅಪಹಾಸ್ಯ ಮಾಡಿದ TMC ನಾಯಕ
ಪ್ರಧಾನಿ ಮೋದಿ ಇತ್ತೀಚೆಗೆ ಶಿಲ್ಲಾಂಗ್ಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅವರು ಸಾಂಪ್ರದಾಯಿಕ ಖಾಸಿ ಉಡುಪನ್ನು ಧರಿಸಿದ್ದರು. ಆದರೆ ತೃಣಮೂಲ ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ ಅವರು ಮೋದಿ ಅವರ ಉಡುಪಿನ ಬಗ್ಗೆ ಪೋಸ್ಟ್ ಮಾಡಿ, 'ಪ್ರಧಾನಿ ಮೋದಿ ಧರಿಸಿದ ಉಡುಪು ಹೆಣ್ಣಿನದೂ ಅಲ್ಲ ಗಂಡಿನದೂ ಅಲ್ಲ. ಫ್ಯಾಷನ್ನ ಆರಾಧಕ ಮಾತ್ರ' ಎಂದು ಬರೆದುಕೊಂದ್ದಾರೆ. ಅದನ್ನು ಇಲ್ಲಿ ಖರೀದಿಸಿ, ಎಂದು ಫೋಟೋ ಜೊತೆಗೆ ಬರೆದುಕೊಂಡಿದ್ದಾರೆ. ಈ ಬಗ್ಗೆ ಬಿಜೆಪಿ ಪ. ಪಂಗಡ ಮೋರ್ಚಾ ವಾಗ್ದಾಳಿ ನಡೆಸಿದೆ.