ಪೊಲೀಸ್ ಆಯುಕ್ತರಾಗಿ ರಮಣ್ ಗುಪ್ತಾ ನಿಯೋಜನೆ: ಅವಳಿನಗರಕ್ಕೆ ಆಗಮಿಸಲಿರುವ ಅಧಿಕಾರಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಲಾಭುರಾಮ್ ಅವರನ್ನು ಬಡ್ತಿ ನೀಡಿದ ಐಜಿಪಿ ಇಂಟಲಿಜೆನ್ಸ್ ವಿಭಾಗಕ್ಕೆ ವರ್ಗಾವಣೆ ಮಾಡಿದ ಬೆನ್ನಲ್ಲೇ ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ಗೆ ಪೊಲೀಸ್ ಆಯುಕ್ತರಾಗಿ ರಮಣ್ ಗುಪ್ತಾ ಆಗಮಿಸಲಿದ್ದಾರೆ.
ಹೌದು.. ಲಾಭೂರಾಮ್ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಸುಮಾರು ದಿನಗಳ ಕಾಲ ಸೇವೆ ಸಲ್ಲಿಸಿದ್ದು, ಈಗ ಬಡ್ತಿ ನೀಡಿ ವರ್ಗಾವಣೆ ಅದೇಶ ಹೊರಡಿಸಿದ್ದು,ಲಾಭೂರಾಮ್ ಅವರಿಂದ ತೆರವಾದ ಸ್ಥಾನಕ್ಕೆ ರಮಣ್ ಗುಪ್ತಾ ನಿಯೋಜನೆ ಮಾಡಲಾಗಿದೆ.
ತಕ್ಷಣವೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದು, ಹು-ಧಾ ಮಹಾನಗರಕ್ಕೆ ನೂತನ ಪೊಲೀಸ್ ಆಯುಕ್ತರಾಗಿ ರಮಣ್ ಗುಪ್ತಾ ಆಗಮಿಸಲಿದ್ದಾರೆ.