ಪಿಎಸ್ ಐ ವಿರುದ್ದ ಕಾಂಗ್ರೆಸ್ ಬೃಹತ್ ಹೋರಾಟ: ಶಾಸಕ ಶರತ್ ಬಚ್ಚೇಗೌಡ

ಪಿಎಸ್ ಐ ವಿರುದ್ದ ಕಾಂಗ್ರೆಸ್ ಬೃಹತ್ ಹೋರಾಟ: ಶಾಸಕ ಶರತ್ ಬಚ್ಚೇಗೌಡ

ಬೆಂಗಳೂರು: ಪಿಎಸ್‌ಐ ಒಬ್ಬರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ಬೇಜವಬ್ದಾರಿ ವರ್ತನೆ, ದಲಿತರ ಮೇಲೆ ದೌರ್ಜನ್ಯ, ಆಡಳಿತ ಪಕ್ಷದ ಏಜಂಟ್ ಆಗಿ ವರ್ತಿಸುತ್ತಿದ್ದಾರೆಂದು ಅರೋಪಿಸಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಮಾಜಿ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಸಾವಿರಾರು ಕೈ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಅದು ಎಲ್ಲಿ ಅಂತೀರ ಈ‌ ಸ್ಟೋರಿ ನೋಡಿ.

ಹೀಗೆ ಶಾಸಕ‌ ಶರತ್ ಬಚ್ಚೇಗೌಡ ಹಾಗೂ ಮಾಜಿ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಕಾಲ್ ನಡಿಗೆ ಜಾಥ ನಡೆಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಹೋರೆಟ ದೃಶ್ಯಗಳು ಕಂಡುಬಂದದ್ದು ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನಲ್ಲಿ. ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸಂಗಮೇಶ್ ಮೇಟಿ ಸರ್ಕಾರಿ ಸಂಭಳ ಪಡೆದು ಪೊಲೀಸ್ ಠಾಣೆಗೆ ಸಮಸ್ಯೆಗಳನ್ನು ಒತ್ತುತರುವ ಸಾರ್ವಜನಿಕರಿಗೆ ಸ್ಪಂದಿಸದೆ ಆಡಳಿತ ಪಕ್ಷದ ಏಜಂಟ್ ಆಗಿ, ದಲಿತರ ಮೇಲೆ ದೌರ್ಜನ್ಯ, ಮಹಿಳೆಯರಿಗೆ ಅಸಹ್ಯ ಪದಗಳಿಂದ ನಿಂದನೆ ಅರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಿರುಮಲಶೆಟ್ಟಹಳ್ಳಿ ಕ್ರಾಸ್ ನಿಂದ ಅನುಗೊಂಡನಹಳ್ಳಿ ಪೊಲೀಸ್ ಠಾಣೆ ವರೆಗು ಪ್ರತಿಭಟನೆ ರ‌್ಯಾಲಿ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಎಸ್.ಪಿ.‌ ಪುರುಷೋತ್ತಮ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದು, ಪ್ರತಿಭಟನಾಕಾರರು ಅನುಗೊಂಡನಹಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನೂಕುನುಗ್ಗಲು ಉಂಟಾಗಿತ್ತು. ನಂತರ ಶಾಸಕ‌ ಶರತ್ ಬಚ್ಚೇಗೌಡ, ಮಾಜಿ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಪ್ರಮುಖ‌ ಕಾಂಗ್ರೆಸ್ ಮುಖಂಡು ಪೊಲೀಸ್ ಠಾಣೆಗೆ ತೆರಳಿ ಪಿಎಸ್‌ಐ ಸಂಗಮೇಶ್ ವಿರುದ್ದ ಕ್ರಮ‌ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿದರು.

ಈ ಸಂಬಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ ಈ ಪ್ರಕರಣ ಸಂಬಂದ ಅಡಿಷನಲ್ ಎಸ್.ಪಿ ಪುರುಷೋತ್ತಮ್ ನೇತೃತ್ವದಲ್ಲಿ ತನಿಖೆ ಕೈಗೊಂಡು ಒಂದು ವಾರದೊಳಗೆ ಕ್ರಮ‌ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಒಟ್ಟಾರೆ ರಾಜ್ಯದಲ್ಲೆ ರಾಜಕೀಯ ಜಿದ್ದಾ ಜಿದ್ದಿಗೆ ಹೆಸರಾಗಿರೋ ಹೊಸಕೋಟೆಯಲ್ಲಿ ಪಿಎಸ್‌ಐ ಮೇಲೆ ಪ್ರತಿಭಟನೆ ನಡೆಸುವ ಮೂಲಕ ಮತ್ತೆ ರಾಜಕೀಯ ಕೆಸರು ಎರಚಾಟ ಜೋರಾಗಿ‌ ನಡೆಯುತ್ತಿರೋದಂತು ಸುಳ್ಳಲ್ಲ.