ಪಾಕ್ ಗಡಿಯಲ್ಲಿ ಅಫ್ಘಾನ್ ಸೈನಿಕರಿಂದ ಗುಂಡಿನ ದಾಳಿ; 6 ಮಂದಿ ನಾಗರಿಕರು ಸಾವು !

ಪಾಕ್ ಗಡಿಯಲ್ಲಿ ಅಫ್ಘಾನ್ ಸೈನಿಕರಿಂದ ಗುಂಡಿನ ದಾಳಿ; 6 ಮಂದಿ ನಾಗರಿಕರು ಸಾವು !

ಬಲೂಚಿಸ್ತಾನ: ಭಾನುವಾರ ರಾತ್ರಿ ಪಾಕ್ ಬಲೂಚ್ ಪ್ರಾಂತ್ಯದ ಚಮನ್ ಜಿಲ್ಲೆಯ ಗಡಿ ಬಳಿ ಅಫ್ಘಾನ್‌ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಆರು ಮಂದಿ ನಾಗರಿಕರು ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಸೇನೆ ಮಾಹಿತಿ ನೀಡಿದೆ. ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಪ್ರಕಾರ, ಆಫ್ಘನ್ ಪಡೆಗಳ ಗುಂಡಿನ ದಾಳಿಯಲ್ಲಿ ಫಿರಂಗಿ & ಮೋರ್ಟಾರ್‌ಗಳು ಸೇರಿದಂತೆ ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದೆ.