ನೋಟ್ ಬ್ಯಾನ್ ನಿಂದ ಎಷ್ಟು ಮನೆಯ ದೀಪ ಆರಿ ಹೋಯ್ತು ಎಂಬ ಅರಿವು ಇದೆಯೇ?: ದಿನೇಶ್ ಗುಂಡೂ ರಾವ್

ನೋಟ್ ಬ್ಯಾನ್ ನಿಂದ ಎಷ್ಟು ಮನೆಯ ದೀಪ ಆರಿ ಹೋಯ್ತು ಎಂಬ ಅರಿವು ಇದೆಯೇ?: ದಿನೇಶ್ ಗುಂಡೂ ರಾವ್

ಬೆಂಗಳೂರು, ನ.8: 'ನೋಟ್ ಬಂಧಿ' ಎಂಬ ಮೋದಿಯವರ ಐತಿಹಾಸಿಕ ಪ್ರಮಾದಕ್ಕೆ ಇಂದು ಆರನೇ ವರ್ಷದ ಸೂತಕ ದಿನ. ಕೇವಲ ಪ್ರಚಾರಕ್ಕಾಗಿ ಮಾಡಿದ ನೋಟ್ ಬಂಧಿ‌ ನಿರ್ಧಾರದಿಂದ ಎಷ್ಟು ಮನೆಯ ದೀಪ ಆರಿ ಹೋಯ್ತು ಎಂಬ ಅರಿವು ನಿಮಗಿದೆಯೇ? ನೋಟ್ ಬಂಧಿಯಿಂದ ಯಾರ ಉದ್ಧಾರವಾಯಿತು ?

ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ನೋಟ್ ಬಂಧಿ' ಎಂಬ ಮೋದಿಯವರ ಐತಿಹಾಸಿಕ ಪ್ರಮಾದಕ್ಕೆ ಇಂದು ಆರನೇ ವರ್ಷದ ಸೂತಕ ದಿನ. ಮೋದಿಯವರೇ, ನೋಟ್ ಬಂಧಿ ಎಂಬ ನಿಮ್ಮ ಎಡಬಿಡಂಗಿ ನಿರ್ಧಾರ ಮಾಡಿದ ಎಡವಟ್ಟು ನಿಮಗೆ ಗೊತ್ತಿದೆಯೇ? ಕೇವಲ ಪ್ರಚಾರಕ್ಕಾಗಿ ಮಾಡಿದ ನೋಟ್ ಬಂಧಿ‌ ನಿರ್ಧಾರದಿಂದ ಎಷ್ಟು ಮನೆಯ ದೀಪ ಆರಿ ಹೋಯ್ತು ಎಂಬ ಅರಿವು ನಿಮಗಿದೆಯೇ? ನೋಟ್ ಬಂಧಿಯಿಂದ ಯಾರ ಉದ್ಧಾರವಾಯಿತು?

ಮೋದಿಯವರ 'ನೋಟ್ ಬಂಧಿ'ಯಿಂದ ಬೀದಿ ವ್ಯಾಪಾರಿಗಳು ಬೀದಿಗೆ ಬಿದ್ದರು, ಬಡವರು ಸರ್ವನಾಶವಾದರು, ಭಾರತದ ಆರ್ಥಿಕತೆ ಪಾತಾಳ ಸೇರಿತು. ಜನರ ನೆಮ್ಮದಿ ಗುಡಿಸಿ ಗುಂಡಾಂತರವಾಯಿತು. ನೋಟ್ ಬಂಧಿ‌ ತನ್ನ ಆಡಳಿತದ ದೊಡ್ಡ ಸಾಧನೆ ಎಂದು ಮೋದಿಯವರಿಗೆ ಭಾಷಣ ಬಿಗಿಯಲು 'ಧಮ್' ಮತ್ತು 'ತಾಕತ್ತು' ಇದೆಯೇ ? ಯಾಕೆ ನೋಟ್ ಬಂಧಿ ಬಗ್ಗೆ ಮೋದಿ ಮಾತನಾಡುವುದಿಲ್ಲ?

'ನೋಟ್ ಬಂಧಿ'ಯಿಂದ ಕಪ್ಪು ಹಣ ತರುತ್ತೇವೆ ಎಂದಿದ್ದರು ಮೋದಿ. ಆ ಕಪ್ಪು ಹಣ ಬಂತೆ ? ನೋಟ್ ಬಂಧಿಯಿಂದ ದೇಶ ಉದ್ಧಾರವಾಗುತ್ತೆ ಎಂದಿದ್ದರು ಮೋದಿ. ದೇಶ ಉದ್ಧಾರವಾಯಿತೇ ? 50 ದಿನ ಅವಕಾಶ ಕೊಡಿ ಇಲ್ಲದಿದ್ದರೆ ನನ್ನನ್ನು ಸುಟ್ಟುಬಿಡಿ ಎಂದಿದ್ದರು ಮೋದಿ. ನೋಟ್ ಬಂಧಿ ವೈಫಲ್ಯಕ್ಕೆ ಎಂದಾದರೂ ಮೋದಿಯವರು ಪ್ರಾಯಶ್ಚಿತ್ತ ಪಟ್ಟರೇ? ಎಂದು ಪ್ರಶ್ನಿಸಿದ್ದಾರೆ.