ಕಾಂತಾರ ಸಿನಿಮಾ ಹೋಲುವ ಕಥೆ! ದೈವವನ್ನು ಎದುರು ಹಾಕಿ ಕೋರ್ಟಿಗೆ ಹೋದ ವ್ಯಕ್ತಿ ಸಾವು

500 ವರ್ಷಗಳ ಇತಿಹಾಸವಿರುವ ಜಾರಂದಾಯ ದೈವಸ್ಥಾನ
500 ವರ್ಷಗಳ ಇತಿಹಾಸವಿರುವ ಜಾರಂದಾಯ ದೈವಸ್ಥಾನದಲ್ಲಿ ದೈವಸ್ಥಾನದ ಆಡಳಿತ ವಿಚಾರದಲ್ಲಿ ಎರಡು ಸಮಿತಿಗಳ ನಡುವೆ ಘರ್ಷಣೆ ನಡೆಯುತ್ತಿತ್ತು. ಘರ್ಷಣೆ ನಡೆದ ಹಿನ್ನೆಲೆ ಈ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ. ಎರಡು ಸಮಿತಿಗಳ ನಡುವಿನ ಘರ್ಷಣೆ ವಿಚಾರವಾಗಿ ಕೋರ್ಟಿನಿಂದ ತಡೆ ಆಜ್ಞೆ ತಂದ ಮರುದಿನವೇ ಜಯ ಪೂಜಾರಿ ಎಂಬ ವ್ಯಕ್ತಿ ನಿಧನರಾಗಿದ್ದಾರೆ.
ಜಯಪ್ಪ ಪೂಜಾರಿ
ಸಮಿತಿಗಳ ಸಂಘರ್ಷಪಡುಹಿತ್ಲು ಜಾರಂದಾಯ ದೇವಸ್ಥಾನವನ್ನು ಬಂಟ ಸೇವಾ ಸಮಿತಿ ನೋಡಿಕೊಳ್ಳುತ್ತಿತ್ತು. ಸೇವಾ ಸಮಿತಿ ಸದಸ್ಯರು ಬದಲಾದ ನಂತರ ಇಲ್ಲಿ ಘರ್ಷಣೆ ಆರಂಭವಾಗಿದೆ. ದೇವಸ್ಥಾನದ ವಿಚಾರವಾಗಿ ಅಧಿಕಾರ ಕಳೆದುಕೊಂಡ ನಂತರ ಪ್ರಕಾಶ ಶೆಟ್ಟಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಅಧಿಕಾರ ಕಳೆದುಕೊಂಡ ಪ್ರಕಾಶ್ ಶೆಟ್ಟಿ ಅವರು ನಂತರ ಪ್ರತ್ಯೇಕ ಟ್ರಸ್ಟ್ ರಚಿಸಿದ್ದಾರೆ. ದೈವಸ್ಥಾನದ ಗುರಿಕಾರರಾದ ಜಯ ಪೂಜಾರಿ ಅವರನ್ನು ಟ್ರಸ್ಟ್ ಅಧ್ಯಕ್ಷರಾಗಿ ನೇಮಸಿತ್ತು. ಈ ಮೂಲಕ ದೈವಸ್ಥಾನದ ಮೇಲೆ ಹಕ್ಕು ಸ್ಥಾಪಿಸಲು ಪ್ರಯತ್ನಿಸಿದ್ದಾಗಿ ಪ್ರತಿವಾದಿಗಳು ಆರೋಪಿಸಿದ್ದಾರೆ.
ಕುಸಿದು ಬಿದ್ದು ಸಾವು
ಘರ್ಷಣೆ ಹಿನ್ನೆಲೆಯಲ್ಲಿ ಪ್ರಕಾಶ ಶೆಟ್ಟಿ ಮತ್ತು ಅಧ್ಯಕ್ಷ ಜಯ ಪೂಜಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಜಯ ಪೂಜಾರಿ ಡಿಸೆಂಬರ್ 24ರಂದು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಕಾಂತಾರ ಸಿನಿಮಾದಲ್ಲಿ ಇಂಥದ್ದೇ ಸ್ಟೋರಿ
ಕಾಂತಾರ ಸಿನಿಮಾದಲ್ಲಿ ಇಂಥದ್ದೇ ದೃಶ್ಯಗಳನ್ನು ಕಾಣಬಹುದು. ಆರಂಭದಲ್ಲಿ ದೈವದ ಮೇಲೆ ನಂಬಿಕೆ ಇಲ್ಲದೆ ಕೋರ್ಟ್ ಮೆಟ್ಟಿಲೇರುವ ವ್ಯಕ್ತಿಯು ಕೋರ್ಟ್ನ ಮೆಟ್ಟಿಲಲ್ಲೇ ರಕ್ತ ಕಾರಿ ಸಾವನ್ನಪ್ಪುತ್ತಾನೆ. ಇದು ದೈವ ಭವಿಷ್ಯ ನುಡಿದಿರುತ್ತದೆ. ನಂತರದಲ್ಲಿ ಗುರುವನನ್ನು ಆಮಿಷಕ್ಕೊಳಪಡಿಸಲು ಭೂಮಾಲೀಕ ಪ್ರಯತ್ನಿಸುತ್ತಾನೆ. ಆದರೆ ಆತ ಒಪ್ಪದೇ ಇದ್ದಾಗ ಆತನನನ್ನು ಕೊಲ್ಲುವ ಕೆಲಸ ನಡೆಯುತ್ತದೆ.