ದೆಹಲಿ ಕೆಂಪು ಕೋಟೆಯಲ್ಲಿ 'ಪ್ರಜಾಪ್ರಭುತ್ವ ಉಳಿಸಿ' ಮೆರವಣಿಗೆ ನಡೆಸಲು ಜಮಾಯಿಸಿದ್ದ 'ಕಾಂಗ್ರೆಸ್' ನಾಯಕರು ಬಂಧನ

ದೆಹಲಿ ಕೆಂಪು ಕೋಟೆಯಲ್ಲಿ 'ಪ್ರಜಾಪ್ರಭುತ್ವ ಉಳಿಸಿ' ಮೆರವಣಿಗೆ ನಡೆಸಲು ಜಮಾಯಿಸಿದ್ದ 'ಕಾಂಗ್ರೆಸ್' ನಾಯಕರು ಬಂಧನ

ವದೆಹಲಿ : ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರಜಾಪ್ರಭುತ್ವ ಉಳಿಸಿ ಮೆರವಣಿಗೆಯನ್ನು ಕೈಗೊಂಡಿದ್ದರು. ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ರಾಜಧಾನಿ ದೆಹಲಿಯ ಕೆಂಪುಕೋಟೆಯಿಂದ ಟೌನ್ ಹಾಲ್‌ವರೆಗೆ 'ಪ್ರಜಾಪ್ರಭುತ್ವ ಉಳಿಸಿ' ಶಾಂತಿ ಮೆರವಣಿಗೆ ನಡೆಸಲು ಕಾಂಗ್ರೆಸ್ ನಿರ್ಧರಿಸಿತ್ತು.

ಮುಂದಿನ 30 ದಿನಗಳಲ್ಲಿ ದೇಶದಾದ್ಯಂತ ಬ್ಲಾಕ್, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಪಾಲ್ಗೊಳ್ಳುವಿಕೆಯೊಂದಿಗೆ 'ಜೈ ಭಾರತ್ ಸತ್ಯಾಗ್ರಹ' ಹಮ್ಮಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ.

ಲೋಕಸಭೆ ಸಂಸದ ಸ್ಥಾನದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿದ ಬಳಿಕ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ತನ್ನ ಪ್ರಚಾರವನ್ನು ತೀವ್ರಗೊಳಿಸಿದೆ.

ಕಾಂಗ್ರೆಸ್ ಇಂದು ದೇಶಾದ್ಯಂತ 35 ನಗರಗಳಲ್ಲಿ ಎರಡು ದಿನಗಳ 'ಪ್ರಜಾಪ್ರಭುತ್ವ ಅನರ್ಹ' ಪತ್ರಿಕಾಗೋಷ್ಠಿ ಅಭಿಯಾನವನ್ನು ಪ್ರಾರಂಭಿಸಿತ್ತು. ಕಾಂಗ್ರೆಸ್‌ನ ಪ್ರಚಾರವು ಅದಾನಿ ಗ್ರೂಪ್‌ ಅಕ್ರಮಗಳ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ [ಜೆಪಿಸಿ] ತನಿಖೆಗೆ ಒತ್ತಾಯಿಸುವ ಗುರಿಯನ್ನು ಹೊಂದಿದೆ.