ದನ ಸಾಕುವವರಿಗೆ, ಮೇಯಲು ಬಿಡುವವರಿಗೆ ರೈಲ್ವೇ ಇಲಾಖೆಯಿಂದ ಎಚ್ಚರಿಕೆ; ಉಲ್ಲಂಘಿಸಿದರೆ ಕಠಿಣ ಕ್ರಮ!

ನವದೆಹಲಿ: ರೈಲ್ವೆ ಹಳಿಗಳ ಸಮೀಪದ ಊರುಗಳಲ್ಲಿ ದನ ಸಾಕುವವರಿಗೆ ಹಾಗೂ ಹಳಿಗಳ ಬಳಿ ದನ ಮೇಯಲು ಬಿಡುವವರಿಗೆ ರೈಲ್ವೆ ಇಲಾಖೆ ಸೂಚನೆಯೊಂದನ್ನು ನೀಡಿದೆ. ಮಾತ್ರವಲ್ಲ, ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.
ಹೀಗೊಂದು ಎಚ್ಚರಿಕೆ ಸಂದೇಶವನ್ನು ಪಶ್ಚಿಮ ರೈಲ್ವೆ ನೀಡಿದ್ದು, ಜಾನುವಾರುಗಳನ್ನು ಸಾಕುವವರು ಹಾಗೂ ಅವುಗಳನ್ನು ಮೇಯಲು ಬಿಡುವವರಿಗೆ ಜಾನವಾರುಗಳನ್ನು ರೈಲ್ವೆ ಹಳಿಗಳ ಬಳಿಗೆ ಬರಲು ಬಿಡದಂತೆ ಸೂಚನೆ ನೀಡಲಾಗಿದೆ. ತಪ್ಪಿದರೆ ಕಠಿಣ ಕ್ರಮ