ಸಾರ್ವಜನಿಕರಿಗೆ ಕಿರುಕುಳ ನೀಡುವ 'ಪೋಲಿಸರಿಗೆ ಬಿಗ್‌ ಶಾಕ್‌': ದಂಪತಿಯಿಂದ ಸುಲಿಗೆ ಆರೋಪ ಇಬ್ಬರು ಸಿಬ್ಬಂದಿ ವಜಾ

ಸಾರ್ವಜನಿಕರಿಗೆ ಕಿರುಕುಳ ನೀಡುವ 'ಪೋಲಿಸರಿಗೆ ಬಿಗ್‌ ಶಾಕ್‌': ದಂಪತಿಯಿಂದ ಸುಲಿಗೆ ಆರೋಪ ಇಬ್ಬರು ಸಿಬ್ಬಂದಿ ವಜಾ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೆಲ ಪೋಲಿಸ್‌ ಅಧಿಕಾರಿಗಳ ವಿರುದ್ದ ಅನೇಕ ಗಂಭಿರವಾದ ಆರೋಪಗಳನ್ನು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಹಲವು ಪೋಲೀಸರು ಜನತೆ ಜೊತೆಗೆ ಬೇಜಾವ್ದಾರಿಂದ ನಡೆದುಕೊಳ್ಳುವುದು ಕೂಡ ಹಲವು ಸಮಯದಲ್ಲಿ ವಿಡಿಯೋ ಸಮೇತ ಸಾಬೀತು ಆಗುತ್ತಿದೆ.

ಈ ನಡುವೆ ಬೆಂಗಳೂರಿನಲ್ಲಿ ಡಿ.8ರಯಲ್ಲಿ ಟೆಕ್ಕಿ ದಂಪತಿಗಳಿಂದ ಹಣ ವಸೂಲಿ ಮಾಡಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಸಂಪಿಗೆಹಳ್ಳಿ ಠಾಣೆಯ ಇಬ್ಬರು ಸಿಬ್ಬಂದಿ ವಜಾ ಮಾಡಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಡಿ.8ರ ಮಧ್ಯರಾತ್ರಿ ನಡೆದ ಘಟನೆಗೆ ಸಂಬಂಧಪಟ್ಠಂತೆ ಹೊಯ್ಸಳ ವಾಹನದಲ್ಲಿ ಇದ್ದ ಪೋಲಿಸ್‌ ಸಿಬ್ಬಂದಿಗಳ ಆರೋಪಕ್ಕೆ ಸಂಬಂಧಪಟ್ಠಂತೆ ಇಲಾಖೆ ತನಿಖೆ ನಡೆದಿದ್ದು, ಇಬ್ಬರನ್ನು ಕೂಡ ಸೇವೆಯಿಂದ ವಜಾ ಮಾಡಲಾಗಿದೆ ಅಂತ ತಿಳಿಸಿದ್ದಾರೆ.