ತುಮಕೂರಿಗೆ ಪ್ರಧಾನಿ ಮೋದಿ ಆಗಮನಕ್ಕೆ ಭರ್ಜರಿ ಸಿದ್ದತೆ : 50 ಸಾವಿರ ಮಂದಿಗೆ ಊಟದ ವ್ಯವಸ್ಥೆ

ತುಮಕೂರು : ಇಂದು ಮಧ್ಯಾಹ್ನ 3.30ಕ್ಕೆ ತುಮಕೂರು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಆಗಮನ ಹಿನ್ನೆಲೆ ಸುಮಾರು 50 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.ತುಮಕೂರು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕಾಗಿ 1 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ಸಾಧ್ಯತೆಯಿದೆ.ಈ ನಿಟ್ಟಿನಲ್ಲಿ 50 ಸಾವಿರ ಜನರಿಗೆ ಊಟ ಮಾಡಲು ಭರ್ಜರಿ ಸಿದ್ದತೆ ಮಾಡಲಾಗಿದೆ. 7 ಗಂಟೆಯಿಂದಲೇ ಮೋದಿ ಅಭಿಮಾನಿಗಳಿಗೆ ಉಪ್ಪಿಟ್ಟು ಕೇಸರಿ ಬಾತ್ ಉಪಹಾರ ಮಾಡಲಾಗಿದೆ. ಬಳಿಕ ಪಲವ್, ಟೋಮಟೋ ಬಾತ್ ಇರಲಿದೆ.
ಮಧ್ಯಾಹ್ನ ಮೊಸರು ಅನ್ನ ಪಾಯಸ ಸೇರಿದಂತೆ ಅನೇಕ ಭಕ್ಷ್ಯಗಳು ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗಿನಿಂದಲೂ 7 ಗಂಟೆಯಿಂದ ಸಂಜೆ ಮೋದಿ ತೆರಳುವ ವರೆಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಸುಮಾರು 200ಕ್ಕೂ ಹೆಚ್ಚು ಬಾಣಸಿಗರಿಂದ ಊಟ ತಯಾರಿಸಲಾಗುತ್ತಿದೆ. 250 ಜನರು ಊಟ ಬಡಿಸಲು ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಮೋದಿ ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳಿಗೆ ಯಾವುದೇ ಊಟ ಕಡಿಮೆಯಾಗದಂತೆ ಭರ್ಜರಿ ಸಿದ್ದತೆಯಲ್ಲಿ ತೊಡಗಿದ್ದಾರೆ.