ತಿರುಪತಿ ತಿಮ್ಮಪ್ಪನ ಭಕ್ತರಿಗೆ ಬಿಗ್ ಶಾಕ್: 2023ರಲ್ಲಿ ವೆಂಕಟೇಶ್ವರನ ಗರ್ಭಗುಡಿ 8 ತಿಂಗಳ ಕಾಲ ಬಂದ್.?
ತಿರುಮಲ : ತಿರುಪತಿ ಭಕ್ತರಿಗೆ ಬಿಗ್ ಶಾಕ್ ಎದುರಾಗಿದ್ದು, 2023ರಲ್ಲಿ ಅಂಧ್ರಪ್ರದೇಶದ ಪ್ರಸಿದ್ಧ ದೇಗುಲ ತಿರುಮಲ ತಿರುಪತಿ ವೆಂಕಟೇಶ್ವರ ದೇಗುಲದ ಗರ್ಭಗುಡಿ 8 ತಿಂಗಳ ಕಾಲ ಮುಚ್ಚಲಿದೆ ಹಿಂದೂಸ್ತಾನ್ ಟೈಮ್ಸ್ ವರದಿ ಬಹಿರಂಗವಾಗಿದೆ.
ತಿರುಮಲದ ಮುಖ್ಯ ಗರ್ಭಗುಡಿ ಮೇಲೆ ಇರುವ ವಿಮಾನ ಆಕೃತಿಯ(ಮೂರು ಅಂತಸ್ತು) ಗೋಪುರ ಆನಂದ ನಿಲಯಕ್ಕೆ ಹೊದಿಸಲಾಗಿದ್ದ ಚಿನ್ನದ ಲೇಪನವನ್ನು ಬದಲಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಟಿ) ನಿರ್ಧರಿಸಿದ್ದು, ಈ ಕೆಲಸವನ್ನು ಫೆಬ್ರುವರಿ ತಿಂಗಳಿನಲ್ಲಿ ಕೆಲಸ ಆರಂಭಗೊಳ್ಳಲಿದೆ. ಈ ಚಿನ್ನದ ಲೇಪನದ ಕಾರ್ಯ ಪೂರ್ಣಗೊಳ್ಳಲು ಆರು ತಿಂಗಳು ಬೇಕಾಗಬಹುದು. ನೂತನ ಚಿನ್ನದ ಲೇಪನ ಕಾರ್ಯ ಪೂರ್ಣಗೊಳ್ಳುವವರೆಗೆ ದೇವಸ್ಥಾನದ ಸಮೀಪ ತಾತ್ಕಾಲಿಕವಾಗಿ ವೆಂಕಟೇಶ್ವರ ವಿಗ್ರಹ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಟಿಟಿಡಿ ಮಂಡಳಿ ಅಧ್ಯಕ್ಷ ವೈ.ವಿ.ಸುಬ್ಬ ರಾವ್ ತಿಳಿಸಿದ್ದಾರೆ.
ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಓ ಆಗಿ ಅನಿಲ್ ಕುಮಾರ್ ಲಹೋಟಿ ನೇಮಕ
ಹಿರಿಯ ರೈಲ್ವೆ ಅಧಿಕಾರಿ ಅನಿಲ್ ಕುಮಾರ್ ಲಹೋಟಿ ಅವರು ರೈಲ್ವೆ ಮಂಡಳಿಯ ಮುಂದಿನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಲಿದ್ದಾರೆ. ಪ್ರಸ್ತುತ, ಅವರು ರೈಲ್ವೆ ಮಂಡಳಿಯ ಸದಸ್ಯ (ಮೂಲಸೌಕರ್ಯ) ಆಗಿದ್ದಾರೆ. ಇವರು ಜನವರಿ 1, 2023 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಹಾಲಿ ರೈಲ್ವೆ ಮಂಡಳಿ ಅಧ್ಯಕ್ಷ ಮತ್ತು ಸಿಇಒ ವಿ.ಕೆ.ತ್ರಿಪಾಠಿ ಅವರು ಡಿಸೆಂಬರ್ 31 ರಂದು ನಿವೃತ್ತರಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ನೇಮಕಾತಿ ಸಮಿತಿಯು ಲಹೋಟಿ ಅವರ ನೇಮಕಕ್ಕೆ ಅನುಮೋದನೆ ನೀಡಿದೆ.
ಸಮಗ್ರ ರೈಲ್ವೆ ಸೇವೆಯಾದ ಇಂಡಿಯನ್ ರೈಲ್ವೆ ಮ್ಯಾನೇಜ್ಮೆಂಟ್ ಸರ್ವೀಸ್ (ಐಆರ್‌ಎಂಎಸ್) ಗೆ ಸರ್ಕಾರ ಅಧಿಸೂಚನೆ ಹೊರಡಿಸಿದ ನಂತರ ರೈಲ್ವೆ ಮಂಡಳಿಯ ಮುಖ್ಯಸ್ಥರ ಮೊದಲ ನೇಮಕಾತಿ ಇದಾಗಿದೆ.
ಲಹೋಟಿ ಅವರು 1984 ರ ಇಂಜಿನಿಯರ್ಸ್ ಬ್ಯಾಚ್ನ ಭಾರತೀಯ ರೈಲ್ವೆ ಸೇವೆಗಳ ಸದಸ್ಯರಾಗಿದ್ದಾರೆ. ಈ ಹಿಂದೆ ಅವರನ್ನು ಪಶ್ಚಿಮ ರೈಲ್ವೆಯ ಜನರಲ್ ಮ್ಯಾನೇಜರ್ ಆಗಿ ನೇಮಿಸಲಾಗಿತ್ತು. ಭಾರತೀಯ ರೈಲ್ವೆಯ ನಾಗ್ಪುರ, ಜಬಲ್ಪುರ ಮತ್ತು ಭುಸಾವಲ್ ವಿಭಾಗಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಮಧ್ಯಪ್ರದೇಶದ ಗುನಾ ಮೂಲದವರಾದ ಲಹೋಟಿ ಐಐಟಿ ರೂರ್ಕಿಯಿಂದ ಮಾಸ್ಟರ್ ಆಫ್ ಎಂಜಿನಿಯರಿಂಗ್ ಪದವಿ ಪಡೆದರು.