ತಾಯಿ ಮೊಬೈಲ್ ಕೊಡಲಿಲ್ಲ ಅಂತ ಆತ್ಮಹತ್ಯೆಗೆ ಶರಣಾದ ಬಾಲಕಿ
ಮೂಡಬಿದರಿ: ಈಗ ಮಕ್ಕಳು ಮೊಬೈಲ್ ಗೆ ಸಾಕಷ್ಟು ಹಚ್ಚಿಕೊಂಡು ಬಿಟ್ಟಿದ್ದಾರೆ. ಊಟ, ತಿಂಡಿ, ನಿದ್ರೇ, ನೀರು ಇಲ್ಲದಿದ್ದರೂ ಪರವಾಗಿಲ್ಲ, ಮೊಬೈಲ್ ಇದ್ದರೇ ಸಾಕು ಅನ್ನೋ ಹಾಗೆ ಆಗಿದೆ. ಹೀಗೆ ಬಾಲಕಿಯೊಬ್ಬಳು ತನಗೆ ತಾಯಿ ಮೊಬೈಲ್ ಕೊಡಲಿಲ್ಲ ಅಂತ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಮೂಡಬಿದರಿಯ ವಾಲ್ಪಾಡಿ ಗ್ರಾಮದ ನಾಗಂದಡ್ಡದಲ್ಲಿ ನಡೆದಿದೆ.
ಮೂಡಬಿದರಿಯ ವಾಲ್ಪಾಡಿ ಗ್ರಾಮದ ನಾಗಂದಡ್ಡ ಗ್ರಾಮ ಉಮೇಶ್ ಪೂಜಾರಿ ಅವರ ಪುತ್ರಿ ಯುತಿ(15), ಅಳಿಯೂರು ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ತಂದೆ ಕೂಲಿ ಕೆಲಸಕ್ಕೆ ತೆರಳಿದ ನಂತ್ರ, ತಾಯಿ ಕೆಲಸ ನಿಮಿತ್ತ ಶಿರ್ತಾಡಿಗೆ ತೆರಳೋದಕ್ಕೆ ಹೊರಟಿದ್ದರು.
ಆಗ ಮಗಳು ಯುತಿಯನ್ನು ನನ್ನೊಂದಿಗೆ ಬರುವಂತೆ ಕರೆದಾಗ, ಆಕ ನನಗೆ ಬರೆಯೋದು ಇದೆ. ಬರೋದಿಲ್ಲ, ನಿನ್ನ ಮೊಬೈಲ್ ಕೊಟ್ಟು ಹೋಗು ಅಂತ ಕೇಳಿದ್ದಾಳೆ. ಆಗ ಶಿರ್ತಾಡಿಗೆ ಹೋಗಿ ಬಂದಮೇಲೆ ಕೊಡುತ್ತೇನೆ ಎಂದಾಗ ಸಿಟ್ಟಾಗಿದ್ದಾಳೆ.
ತಾಯಿ ತನ್ನ ಪಾಡಿಗೆ ತಾನು ತೆರಳಿ, ಮಧ್ಯಾಹ್ನ ಮನೆಗೆ ವಾಪಾಸು ಬಂದಾಗ ಕಿರಿ ಮಗಳು ಯುತಿ ಮನೆಯಲ್ಲಿ ಕಂಡಿಲ್ಲ. ಅಕ್ಕ ಪಕ್ಕದ ಮನೆಯವರನ್ನು ವಿಚಾರಿಸಿದರೂ ಯಾರಿಂದಲೂ ಯುತಿ ಬಗ್ಗೆ ಮಾಹಿತಿ ದೊರೆತಿಲ್ಲ. ಸಂಜೆ 4 ಗಂಟೆಯ ವೇಳೆಗೆ ಮನೆ ಪಕ್ಕದ ಬಾವಿಯಲ್ಲಿ ಯುತಿ ಮೃತದೇಹ ಪತ್ತೆಯಾಗಿದ್ದು, ಬಾಲಕಿ ತಾಯಿ ಮೊಬೈಲ್ ಕೊಡದಿದ್ದಕ್ಕೇ ಕೋಪಗೊಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗುತ್ತಿದೆ.
ಮಕ್ಕಳೇ ದಯವಿಟ್ಟು ಹೀಗೆ ಮಾಡಿಕೊಳ್ಳಬೇಡಿ. ಕೆಲಸ ನಿಮಿತ್ತವೋ, ಬೇರೆ ಯಾವುದೋ ಕಾರಣಕ್ಕೆ ನಿಮ್ಮ ತಂದೆ-ತಾಯಿಗಳಿಗೆ ಪೋನ್ ಬೇಕಾಗಿರುತ್ತದೆ. ಅದಕ್ಕೆ ಕೆಲ ವೇಳೆ ಕೊಟ್ಟಿರೋದಿಲ್ಲ. ನೀವು ಅಷ್ಟಕ್ಕೆ ಸಿಟ್ಟು ಮಾಡಿಕೊಂಡು ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂಬುದು ನಮ್ಮ ಮನವಿ ಕೂಡ ಆಗಿದೆ.