ಜಿಲ್ಲಾ ಆಸ್ಪತ್ರೆ ಯಲ್ಲಿ ತಾಯಿ ಮಕ್ಕಳ ಸಾವು ಕೇಸ್: ತಮ್ಮದೇ ಸರ್ಕಾರದ ವಿರುದ್ದ ಸ್ವಪಕ್ಷ ಶಾಸಕರ ಅಸಮಾಧಾನ
ಬೆಂಗಳೂರು: ತುಮಕೂರು ಜಿಲ್ಲಾ ಆಸ್ಪತ್ರೆ ಯಲ್ಲಿ ತಾಯಿ ಮಕ್ಕಳ ಸಾವು ಪ್ರಕರಣ ಸಂಬಂಧ ತಮ್ಮದೇ ಸರ್ಕಾರದ ವಿರುದ್ದ ಸ್ವಪಕ್ಷ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರಿನಲ್ಲಿ ಪೋಸ್ಟ್ ಮಾಡಿರುವ ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು, ಆಸ್ಪತ್ರೆಗಳು ಇರುವುದು ಪ್ರಾಣ ಉಳಿಸಲಿಕ್ಕೆ ಹೊರತು.
ಅಲ್ಲದೇ ಪರೋಕ್ಷವಾಗಿ ಹಿಂದಿನ ಬಳ್ಳಾರಿ ವಿಮ್ಸ್ ಆಸ್ಪತ್ರೆ ಘಟನೆ ಬಗ್ಗೆ ಶಾಸಕರು ಆಕ್ರೋಶ ಹೊರ ಹಾಕಿದ್ದಾರೆ. ವಿದ್ಯುತ್ ವ್ಯತ್ಯಯ ದಿಂದ ವೆಂಟಿಲೇಟರ್ ಕೈ ಕೊಟ್ಡು, ರೋಗಿಗಳು ಸಾವನ್ನಪ್ಪಿದ್ದು, ತಾಂತ್ರಿಕ ಕಾರಣಗಳಿಂದಲೇ ಬಡ ರೋಗಿಗಳು ಸಾವನ್ನಪ್ಪಿದ್ದಾರೆ. ಹೀಗಾಗಿ ಆಸ್ಪತ್ರೆಗಳು ಇರುವುದು ಪ್ರಾಣ ಉಳಿಸುವುದಕ್ಕಾಗಿಯೇ ಹೊರತು ತೆಗೆಯುವುದಕ್ಕಲ್ಲ ಎಂದು ಎಸ್ ಸುರೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ಹೊರ ಹಾಕಿದ್ದಾರೆ.