ಗಾಳಿಯಲ್ಲಿ ನೇತಾಡಿ ಖತರ್ನಾಕ್ ರೀತಿಯಲ್ಲಿ ಕಾಗೆಯ ಬೇಟೆಯಾಡಿದ ಹಾವು.. ವಿಡಿಯೋ ನೋಡಿ

ಗಾಳಿಯಲ್ಲಿ ನೇತಾಡಿ ಖತರ್ನಾಕ್ ರೀತಿಯಲ್ಲಿ ಕಾಗೆಯ ಬೇಟೆಯಾಡಿದ ಹಾವು.. ವಿಡಿಯೋ ನೋಡಿ

ಸಾಮಾಜಿಕ ಮಾಧ್ಯಮ ಪ್ರಪಂಚ ತುಂಬಾ ವಿಚಿತ್ರವಾಗಿದೆ. ಏಕೆಂದರೆ ಚಿತ್ರ ವಿಚಿತ್ರ ಸಂಗತಿಗಳು ಅಲ್ಲಿ ನಿಮಗೆ ನೋಡಲು ಸಿಗುತ್ತವೆ ಮತ್ತು ಆ ಘಟನೆಗಳು ನಮ್ಮ ಊಹೆಯನ್ನು ಕೂಡ ಮೇರುತ್ತವೆ. ಕೆಲವು ಸಂದರ್ಭಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುವ ವಿಡಿಯೋ ನೋಡಿ ಮೈಮೇಲಿನ ಕೂದಲುಗಳು ನೆಟ್ಟಗಾಗುತ್ತವೆ ಮತ್ತು ಅವುಗಳನ್ನು ನೋಡಿ ಜನರು ಕೆಲ ಕ್ಷಣಗಳ ಕಾಲ ಸ್ತಬ್ಧರಾಗುತ್ತಾರೆ.

ಇವುಗಳಲ್ಲಿ ಮನುಷ್ಯರಿಂದ ಹಿಡಿದು ಪ್ರಾಣಿಗಳವರೆಗಿನ ವಿಡಿಯೋಗಳು ಶಾಮೀಲಾಗಿವೆ. ಇದೀಗ ಅಂತಹುದೇ ಒಂದು ವೀಡಿಯೋ ಮುನ್ನೆಲೆಗೆ ಬಂದಿದ್ದು, ಅದನ್ನು ನೋಡಿದ್ರೆ ನಿಮ್ಮ ಉಸಿರು ಒಂದು ಕ್ಷಣ ನಿಲ್ಲುವುದು ಗ್ಯಾರಂಟಿ. ಏಕೆಂದರೆ, ಈದೈತ್ಯ ಹಾವೊಂದು ಕಾಗೆಯನ್ನು ಅತ್ಯಂತ ಅಪಾಯಕಾರಿ ರೀತಿಯಲ್ಲಿ ಬೇಟೆಯಾಡಿದೆಹಾವು ಎಷ್ಟು ಅಪಾಯಕಾರಿ ಎಂಬ ಸಂಗತಿ ಯಾರಿಗೂ ಹೇಳಬೇಕಾಗಿಲ್ಲ. ಕೆಲವೊಮ್ಮೆ ಕಣ್ಣು ಮಿಟುಕಿಸುವಷ್ಟರಲ್ಲಿ ಹಾವು ತನ್ನ ಎದುರಾಳಿಗೆ ಬೇಟೆಯಾಡುತ್ತದೆ. ಹೀಗಾಗಿ ಜನರು ಹಾವುಗಳಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಕೆಲವೊಮ್ಮೆ ಹಾವು ದೊಡ್ಡ ದೊಡ್ಡ ಪ್ರಾಣಿಗಳನ್ನು ಕೂಡ ಮಣ್ಣುಮುಕ್ಕಿಸುತ್ತವೆ. ಆದರೆ, ಈ ವೈರಲ್ ವೀಡಿಯೊದಲ್ಲಿ, ನಿಮ್ಮ ಉಸಿರಾಟಕ್ಕೆ ಬ್ರೇಕ್ ಹಾಕುವ ಒಂದು ಸಂಗತಿಯನ್ನು ನೀವು ನೋಡುವಿರಿ. ವೀಡಿಯೋದಲ್ಲಿ ಹಾವು ಗಾಳಿಯಲ್ಲಿ ನೇತಾಡುವ ಮೂಲಕ ಕಾಗೆಯನ್ನು ಹೇಗೆ ಬೇಟೆಯಾಡುತ್ತಿದೆ ಎಂಬುದನ್ನು ನೀವು ನೋಡಬಹುದು. ಹಾವು ಆಂಟಿನಾ ಕಂಬಕ್ಕೆ ನೇತಾಡುತ್ತಿದ್ದು, ಕಾಗೆಯನ್ನು ತನ್ನ ದವಡೆಗಳಲ್ಲಿ ಹಿಡಿದುಕೊಂಡಿದೆ. ಕಾಗೆಯ ಸ್ಥಿತಿ ನೋಡಿ ನಿಮಗೂ ಒಂದು ಕ್ಷಣ ಕನಿಕರ ಬರಬಹುದು ಕೊನೆಯಲ್ಲಿ, ಹಾವು ಏನು ಮಾಡುತ್ತದೆ ಎಂಬುದನ್ನು ನೋಡಿ ನೀವೂ ಕೂಡ ನಿಬ್ಬೆರಗಾಗುವಿರಿ. ಹಾಗಾದ್ರೆ ಆ ಶಾಕಿಂಗ್ ವೀಡಿಯೋ ಇಲ್ಲಿದೆ ನೋಡಿ..