ಗಡಿಯಲ್ಲಿ ಮತ್ತೊಂದು ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್
ಅಮೃತಸರ ಸೆಕ್ಟರ್‌ನಲ್ಲಿ ಇಂದು ಪಾಕ್ ನ ಡ್ರೋನ್ ಅನ್ನು ಹೊಡೆದುರುಳಿಸುವ ಮೂಲಕ BSF ಮತ್ತೊಂದು ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿದೆ. ಕಳೆದ ಕೆಲ ದಿನಗಳಲ್ಲಿ ಪಂಜಾಬ್ ಗಡಿಯಲ್ಲಿ BSF ಸಿಬ್ಬಂದಿ ನೆಲಸಮಗೊಳಿಸಿರುವ 3ನೇ ಡ್ರೋನ್ ಇದಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ BSF ವಕ್ತಾರರು, 'ಇಂದು ಬೆಳಿಗ್ಗೆ 7.45ಕ್ಕೆ ಅಮೃತಸರ ಸೆಕ್ಟರ್‌ನ ಪುಲ್ಮೋರಾದಲ್ಲಿ ಗಡಿ ಹೊರಠಾಣೆ ಬಳಿ ಒಳನುಗ್ಗುತ್ತಿದ್ದ ಪಾಕಿಸ್ತಾನಿ ಡ್ರೋನ್ ಅನ್ನು BSF ಸಿಬ್ಬಂದಿ ಪತ್ತೆ ಮಾಡಿ, ಹೊಡೆದುರುಳಿಸಿದರು ಎಂದಿದ್ದಾರೆ.