ಕೋಲಾರದಲ್ಲಿ ಡಿಸಿಸಿ ಬ್ಯಾಂಕ್ ಪುನಶ್ಚೇತನನಗೊಳಿಸಿದ್ದು ಸಿದ್ದರಾಮಯ್ಯ: ಹೊಗಳಿ ಕೊಂಡಾಡಿದ ಕೃಷ್ಣಬೈರೇಗೌಡ
ಕೋಲಾರ: ಮುಂದಿನ ವಿಧಾನಸಭೆ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಗೆ ನಿರ್ಧರಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಮತ್ತೆ ಕೋಲಾರ ಕ್ಷೇತ್ರದ ಪ್ರವಾಸ ಕೈಗೊಂಡಿದ್ದು, ವೇಮಗಲ್ ನಲ್ಲಿ ನಡೆಯುವ ಮಹಿಳಾ ಸಮಾವೇಶ ನಡೆಯುತ್ತಿದೆ.
ಈ ವೇಳೆ ಮಾಜಿ ಸಚಿವ ಕೃಷ್ಣಬೈರೇಗೌಡ ಭಾಷಣ ಮಾಡಿದ್ದಾರೆ.ಸಿದ್ದರಾಮಯ್ಯರನ್ನು ಹೊಗಳಿ ಕೊಂಡಾಡಿದ್ದಾರೆ. ಕೋಲಾರದಲ್ಲಿ ಬಾಗಿಲು ಹಾಕಿದ್ದಂತ ಡಿಸಿಸಿ ಬ್ಯಾಂಕ್ ಪುನಶ್ಚೇತನನಗೊಳಿಸಿದ್ದು ಸಿದ್ದರಾಮಯ್ಯ, ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ವಿಶೇಷ ಅನುದಾನ ಕೊಟ್ಟು ಡಿಸಿಸಿ ಬ್ಯಾಂಕ್ ಗೆ ಮರುಜೀವ ಕೊಟ್ಟಿದ್ದಾರೆ.
ಅವರು ರೈತರಿಗೆ ಹಾಗೂ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಿದ್ದು ಗ್ರಾಮೀಣ ಭಾಗದಲ್ಲಿ ಇವತ್ತು ಕೃಷಿ, ಹೈನುಗಾರಿಕೆ, ರೇಷ್ಮೆ ಇನ್ನೂ ಜೀವಂತವಾಗಿದೆ ಅಂದರೆ ಅದಕ್ಕೆ ಕಾರಣ ಮಹಿಳೆಯರು, ಅದಕ್ಕಾಗಿ ಮಹಿಳೆಯರಿಗೆ ಸಾಲ ನೀಡುವ ಆಲೋಚನೆ ಮಾಡಿದ್ದೇ ಸಿದ್ದರಾಮಯ್ಯ ಎಂದು ಕೃಷ್ಣಬೈರೇಗೌಡ ಹಾಡಿಹೊಗಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಒಂದು ಜಾತಿ, ಧರ್ಮಕ್ಕೆ ಸಿಮೀತರಲ್ಲ, ಸಿದ್ದರಾಮಯ್ಯ ಕಂಡರೆ ಹೆಣ್ಣುಮಕ್ಕಳು ಗೌರವಿಸುತ್ತಾರೆ ಎಂದು ಹೇಳಿದ್ದಾರೆ.