ಕೃಷಿ ಪಂಪ್ಸೆಟ್ಗೆ ಪಿಎಂ ಕುಸುಮ್

ಬೆಳಗಾವಿ: ಪಿಎಂ ಕುಸುಮ್ಸಿ ಯೋಜನೆಯಡಿ 3,37,000 ರೈತರ ಕೃಷಿ ಪಂಪ್ಸೆಟ್ಗಳಿಗೆ ಶೀಘ್ರವೇ ಸೋಲಾರ್ ಫೀಡರ್ ಮೂಲಕ ವಿದ್ಯುತ್ ಸಂಪರ್ಕ ಒದಗಿಸಲಾಗುತ್ತದೆ ಎಂದು ಇಂಧನ ಸಚಿವ ವಿ.ಸುನೀಲ್ಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು. ಪಿಎಂ ಕುಸುಮ್ಸಿ ಯೋಜನೆ ಮೂಲಕ ಪ್ರಧಾನಿ ಅವರ ಈ ಕೊಡುಗೆಯನ್ನು ಬಳಸಿಕೊಳ್ಳಲಾಗುತ್ತಿದೆ, ಈಗಾಗಲೆ ಯೋಜನೆಗೆ ಟೆಂಡರ್ ಕೂಡ ಆಗಿದೆ, ಒಟ್ಟು 1300 ಮೆಗಾವಾಟ್ ವಿದ್ಯುತ್ ಅನ್ನು ಸೋಲಾರ್ ಫೀಡರ್ ಮೂಲಕ ಐಪಿಸೆಟ್ಗಳಿಗೆ ನೀಡಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು.
ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಹಾಕಿದ್ದಾರೆ, ಇದರಲ್ಲಿ 66,086 ಮಂದಿಗೆ ವಿದ್ಯುತ್ ಸಂಪರ್ಕ ಒದಗಿಸುವುದಕ್ಕೆ ಟೆಂಡರ್ ಆಗಿದೆ, ತಕ್ಷಣವೇ ಸಕ್ರಮ ಮಾಡಿಕೊಡಲಾಗುತ್ತದೆ. ಉಳಿದದ್ದನ್ನು ಮುಂದಿನ ಹಂತದಲ್ಲಿ ಒದಗಿಸಲಾಗುವುದು. ಒಟ್ಟಾರೆಯಾಗಿ ರಾಜ್ಯದಲ್ಲಿ 32.55 ಲಕ್ಷ ಕೃಷಿ ಪಂಪ್ಸೆಟ್ಗಳಿವೆ, 1900 ಮೆಗಾವಾಟ್ ವಿದ್ಯುತ್ ಪ್ರತಿದಿನ ಇದಕ್ಕೆ ವಿನಿಯೋಗವಾಗುತ್ತದೆ, ವರ್ಷಕ್ಕೆ 13,632 ಕೋಟಿ ರೂ. ಸಬ್ಸಿಡಿಯನ್ನು ರೈತರಿಗಾಗಿ ನೀಡಲಾಗುತ್ತದೆ ಎಂದು ಹೇಳಿದರು. ಮಧುಗಿರಿ ಶಾಸಕ ವೀರಭದ್ರಯ್ಯ ಪ್ರಶ್ನೆಗೆ ಉತ್ತರಿಸಿದ ಸುನೀಲ್ಕುಮಾರ್, ಇದುವರೆಗೆ 71,115 ರೈತರು ತತ್ಕಾಲ್ ಯೋಜನೆಯಡಿ ಐಪಿ ಸೆಟ್ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದಾರೆ, ಅದರಲ್ಲಿ ಮೊದಲ ಹಂತದಲ್ಲಿ 2014 ರೈತರಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗುವುದು. 68 ಸಾವಿರ ರೈತರು ತತ್ಕಾಲ್ ಸೇವೆಗಾಗಿ ತಮ್ಮ ವಂತಿಗೆಯಾದ 10 ಸಾವಿರ ರೂ. ಪಾವತಿಸಿದ್ದಾರೆ, ಆದರೆ ಆಯಾ ವಿದ್ಯುತ್ ಕಂಪನಿ ತಲಾ 1.5 ಲಕ್ಷ ರೂ. ವ್ಯಯಿಸಬೇಕಾಗಿದೆ ಎಂದರು.