ಕುರ್‌ಕುರೆ ಪ್ಯಾಕೇಟ್‌‌ಗಳಲ್ಲಿ 500 ರೂ. ನೋಟುಗಳು ಪತ್ತೆ; ಖರೀದಿಗೆ ಮುಗಿಬಿದ್ದ ಮಂದಿ

ಕುರ್‌ಕುರೆ ಪ್ಯಾಕೇಟ್‌‌ಗಳಲ್ಲಿ 500 ರೂ. ನೋಟುಗಳು ಪತ್ತೆ; ಖರೀದಿಗೆ ಮುಗಿಬಿದ್ದ ಮಂದಿ

ರಾಯಚೂರು: ಕುರ್‌‌ಕುರೆ ಪ್ಯಾಕೆಟ್‌ಗಳಲ್ಲಿ 500 ರೂ. ನೋಟುಗಳು ಪತ್ತೆಯಾದ ಘಟನೆ ಜಿಲ್ಲೆಯ ಹುಣೂರು ಗ್ರಾಮದಲ್ಲಿ ನಡೆದಿದೆ. 5 ರೂ. ನ ಕುರ್‌ಕುರೆ ಪ್ಯಾಕೆಟ್‌ಗಳಲ್ಲಿ 500 ರೂ. ಅಸಲಿ ನೋಟ್‌ಗಳು ಕಂಡುಬಂದಿವೆ. ಕೆಲ ಪ್ಯಾಕೆಟ್‌ಗಳಲ್ಲಿ 5-6 ನೋಟ್‌‌ಗಳು ಕಂಡುಬಂದಿವೆ. ಇದರಿಂದ ಆಸೆಗೆ ಬಿದ್ದ ಗ್ರಾಮಸ್ಥರು 500 ರೂ.ಸಿಗುವ ಕುರ್‌ಕುರೆ ಪ್ಯಾಕೆಟ್‌ಗಳಲ್ಲಿ ಖರೀದಿಸಲು ಮುಗಿಬಿದ್ದಿದ್ದಾರೆ. ಕುರ್‌ಕುರೆ ಸ್ಟಾಕ್‌ ಖಾಲಿಯಾಗಿದ್ದು, ಇನ್ನಷ್ಟು ಕುರ್‌ಕುರೆ ತರುವಂತೆ ಅಂಗಡಿಯವರಿಗೆ ಒತ್ತಾಯಿಸಿದ್ದಾರೆ.