ಕಾರ್ಮಿಕರಿಗೆ ಕೂಲಿ | ಕೇರಳ, ಜಮ್ಮುಕಾಶ್ಮೀರ ಟಾಪ್‌‌; ಗುಜರಾತ್‌, ಮಧ್ಯಪ್ರದೇಶ ಅತ್ಯಂತ ಕಡಿಮೆ – RBI ವರದಿ

ಕಾರ್ಮಿಕರಿಗೆ ಕೂಲಿ | ಕೇರಳ, ಜಮ್ಮುಕಾಶ್ಮೀರ ಟಾಪ್‌‌; ಗುಜರಾತ್‌, ಮಧ್ಯಪ್ರದೇಶ ಅತ್ಯಂತ ಕಡಿಮೆ – RBI ವರದಿ

ಹಣದುಬ್ಬರ ಮತ್ತು ಬಡ್ಡಿದರಗಳು ಹೆಚ್ಚಾಗುತ್ತಿರುವ ವೇಳೆಯಲ್ಲಿ ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿನ ಕೃಷಿ ಕಾರ್ಮಿಕರು ದೇಶದಲ್ಲೆ ಅತ್ಯಂತ ಕಡಿಮೆ ದೈನಂದಿನ ಕೂಲಿ ಪಡೆಯುತ್ತಾರೆ ಹಾಗೂ ಕೇರಳ ಮತ್ತು ಜಮ್ಮು ಕಾಶ್ಮೀರದ ಕೃಷಿ ಕಾರ್ಮಿಕರು ಅತ್ಯಂತ ಹೆಚ್ಚಿನ ದೈನಂದಿನ ಕೂಲಿ ಪಡೆಯುತ್ತಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌‌ಬಿಐ) ವರದಿ ಹೇಳಿದೆ

ಮಾರ್ಚ್ 2022 ಕ್ಕೆ ಕೊನೆಗೊಂಡ ವರ್ಷದಲ್ಲಿ ಆರ್‌‌ಬಿಐ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಮಧ್ಯಪ್ರದೇಶದ ಗ್ರಾಮೀಣ ಪ್ರದೇಶದ ಪುರುಷ ಕೃಷಿ ಕಾರ್ಮಿಕರು ಕೇವಲ 217.8 ರೂ. ದೈನಂದಿನ ಕೂಲಿ ಪಡೆದರೆ, ಗುಜರಾತ್‌ನಲ್ಲಿ ಕೃಷಿ ಕಾರ್ಮಿಕ 220.3 ರೂ. ಪಡೆಯುತ್ತಾನೆ. ಅದಾಗ್ಯೂ ಈ ಎರಡೂ ರಾಜ್ಯಗಳಲ್ಲಿ ನೀಡುವಗುಜರಾತಿನಲ್ಲಿ ಒಬ್ಬ ಗ್ರಾಮೀಣ ಕೃಷಿ ಕಾರ್ಮಿಕನಿಗೆ ತಿಂಗಳಿಗೆ 25 ದಿನ ಕೆಲಸ ಸಿಕ್ಕಿದರೆ, ಅವನ ಮಾಸಿಕ ಸಂಪಾದನೆಯು ತಿಂಗಳಿಗೆ ಸುಮಾರು 5,500 ರೂಪಾಯಿಗಳಷ್ಟಿರುತ್ತದೆ, ಇದು ನಾಲ್ಕೈದು ಜನರಿರುವ ಕುಟುಂಬದ ವೆಚ್ಚವನ್ನು ಪೂರೈಸಲು ಸಾಕಾಗುವುದಿಲ್ಲ. ಆದರೆ ಅತಿ ಹೆಚ್ಚು ವೇತನ ನೀಡುವ ಕೇರಳದ ಗ್ರಾಮೀಣ ಕೃಷಿ ಕಾರ್ಮಿಕರು ತಿಂಗಳಿಗೆ 25 ದಿನಗಳ ಕೆಲಸಕ್ಕೆ ಸರಾಸರಿ 18,170 ರೂ. ಪಡೆಯುತ್ತಾರೆ.

2021-22 ರ ಆರ್ಥಿಕ ವರ್ಷವು ಗ್ರಾಮೀಣ ಆರ್ಥಿಕತೆಗೆ ಕೆಟ್ಟದ್ದಾಗಿ ಪರಿಣಮಿಸಿದ್ದು, ಕೋವಿಡ್ ಸಾಂಕ್ರಾಮಿಕವು ಉದ್ಯೋಗಗಳು ಮತ್ತು ಆದಾಯದ ಮಟ್ಟದ ಮೇಲೆ ಹೊಡೆತ ನೀಡಿದೆ. ಮಧ್ಯಪ್ರದೇಶದಲ್ಲಿ ಕೃಷಿ ಕಾರ್ಮಿಕರ ಮಾಸಿಕ ಕೂಲಿ ಸುಮಾರು 5,445 ರೂ. ಆಗಿದೆ. ಕೃಷಿ ಕಾರ್ಮಿಕರಿಗೆ ಕಡಿಮೆ ಕೂಲಿ ನೀಡುವ ಇತರ ರಾಜ್ಯಗಳಲ್ಲಿ ಉತ್ತರ ಪ್ರದೇಶ ( ಗ್ರಾಮೀಣ ಕೃಷಿ ಕಾರ್ಮಿಕರು ಸರಾಸರಿ ದಿನಗೂಲಿ 270 ರೂ ) ಮಹಾರಾಷ್ಟ್ರ (284.2 ರೂ.) ಒಡಿಶಾ (269.5 ರೂ.) ಸೇರಿದೆ.

ಪ್ರತಿ ಕೃಷಿ ಕಾರ್ಮಿಕರಿಗೆ ಸರಾಸರಿ 726.8 ರೂ. ಕೂಲಿ ನೀಡುವುದರೊಂದಿಗೆ ಹೆಚ್ಚು ವೇತನ ನೀಡುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಅಗ್ರ ಸ್ಥಾನದಲ್ಲಿದೆ. ಕೇರಳದಲ್ಲಿನ ಹೆಚ್ಚಿನ ಕೂಲಿ ಇತರ ಕಳಪೆ ವೇತನ ನೀಡುವ ರಾಜ್ಯಗಳ ಕೃಷಿ ಕಾರ್ಮಿಕರನ್ನು ಆಕರ್ಷಿಸಿದ್ದು, ಹೀಗಾಗಿ ಸುಮಾರು 25 ಲಕ್ಷ ವಲಸೆ ಕಾರ್ಮಿಕರು ರಾಜ್ಯದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಜಮ್ಮು ಕಾಶ್ಮೀರದಲ್ಲಿ, ಕೃಷಿ ಕಾರ್ಮಿಕರು ಪ್ರತಿ ವ್ಯಕ್ತಿಗೆ ಸರಾಸರಿ 524.6 ರೂ., ಹಿಮಾಚಲ ಪ್ರದೇಶ 457.6 ರೂ. ಮತ್ತು ತಮಿಳುನಾಡು 445.6 ರೂ. ಕೂಲಿ ಪಡೆಯುತ್ತಾರೆ.