ಕಾಂಗ್ರೆಸ್‌ ನಿಂದಲೇ ಭ್ರಷ್ಟಾಚಾರ ಹುಟ್ಟಿದೆ; ನಮಗೆ ನೀತಿ ಪಾಠ ಕೇಳುವ ಅಗತ್ಯವಿಲ್ಲ; ಸಿ.ಟಿ.ರವಿ ವಾಗ್ದಾಳಿ

ಕಾಂಗ್ರೆಸ್‌ ನಿಂದಲೇ ಭ್ರಷ್ಟಾಚಾರ ಹುಟ್ಟಿದೆ; ನಮಗೆ ನೀತಿ ಪಾಠ ಕೇಳುವ ಅಗತ್ಯವಿಲ್ಲ; ಸಿ.ಟಿ.ರವಿ ವಾಗ್ದಾಳಿ

ಮಂಡ್ಯ: ಕಾಂಗ್ರೆಸ್‌ ನವರಿಂದಲೇ ಭ್ರಷ್ಟಾಚಾರ ಹುಟ್ಟಿದ್ದೆ. ಹೀಗಾಗಿ ಅವರು ನಮಗೆ ನೀತಿ ಪಾಠ ಕೇಳುವ ಅಗತ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್.ಪಿ.ಸ್ವಾಮಿ ಹಾಗೂ ಮುಖಂಡರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ಯಾರೋ ಸರ್ಕಾರಿ ಅಧಿಕಾರಿಯೊಬ್ಬರ ಬಳಿ ವಿಧಾನಸೌಧದಲ್ಲಿ 10 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದರು. ಆದರೆ ಕಾಂಗ್ರೆಸ್‌ನವರು ನಮ್ಮ ಪಕ್ಷದ ನಾಯಕರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಇದೇ ವಿಧಾನಸೌಧದಲ್ಲಿ ಟಿನ್ ಕ್ಯಾರಿಯನಲ್ಲಿ ಸಚಿವರೊಬ್ಬರ ಕೊಠಡಿಯಲ್ಲೇ ಲಕ್ಷಾಂತರ ರೂಪಾಯಿ ಹಣ ಸಿಕ್ಕಿದ್ದರ ಬಗ್ಗೆ ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.