ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ಬಹುಮಾನ

ನವದೆಹಲಿ, ಮೇ 18- ಒಲಿಂಪಿಕ್ಸ್ ನಲ್ಲಿ 2 ಬಾರಿ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದ ಕುಸ್ತಿಪಟು ಈಗ ಕೊಲೆ ಆರೋಪ ಹೊತ್ತಿದ್ದು ಈತನ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ ನೀಡಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಗಲಭೆಯಲ್ಲಿ ಯುವ ಕುಸ್ತಿಪಟು ಸಾವನ್ನಪ್ಪಿರುವ ಹಿಂದೆ ಸುಶೀಲ್ ಕುಮಾರ್ ರ ಕೈವಾಡ ಇದ್ದು ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ. ಇತ್ತೀಚೆಗಷ್ಟೇ ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ 2 ಗುಂಪುಗಳ ನಡುವೆ ಜಗಳ ನಡೆದಿದೆ, ಒಂದು ಹಂತದಲ್ಲಿ ಜಗಳ ವಿಕೋಪಕ್ಕೆ ಹೋಗಿ ಯುವ ರಸ್ಲರ್ ಸಾವನ್ನಪ್ಪಿದ್ದು ಇದರ ಹಿಂದೆ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಹಾಗೂ ಅಜಯ್ ಕುಮಾರ್ ಎಂಬುವವರ ಕೈವಾಡ ಇದ್ದು ಅಂದಿನಿಂದಲೂ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಈಗಾಗಲೇ ಸುಶೀಲ್ ಗೆ ಜಾಮೀನು ರಹಿತ ವಾರೆಂಟ್ ಅನ್ನು ದೆಹಲಿ ಹೈಕೋರ್ಟ್ ಹೊರಡಿಸಿದ್ದರೆ, ಇದಕ್ಕೂ ಮುಂಚೆ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ. ಕೊಲೆ ಆರೋಪ ಹೊತ್ತು ತಲೆಮರೆಸಿಕೊಂಡಿರುವ ಸುಶೀಲ್ ಕುಮಾರ್ ಅವರನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ಹಾಗೂ ಅಜಯ್ ಕುಮಾರ್ ಬಗ್ಗೆ ಸೂಕ್ತ ಮಾಹಿತಿ ನೀಡಿದವರಿಗೆ 50 ಸಾವಿರ ಇನಾಮು ನೀಡಲಾಗುವುದು ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ಬಹುಮಾನ