ಎಸ್.ಡಿ.ಎಂ. ದಂತ ಮಹಾವಿದ್ಯಾಲಯಕ್ಕೆ ನೂತನ ಸಂಚಾರಿ ದಂತ ಚಿಕಿತ್ಸಾಲಯದ ಕೊಡುಗೆ

ಎಸ್.ಡಿ.ಎಂ. ದಂತ ಮಹಾವಿದ್ಯಾಲಯಕ್ಕೆ ನೂತನ ಸಂಚಾರಿ ದಂತ ಚಿಕಿತ್ಸಾಲಯದ ಕೊಡುಗೆ

ಧಾರವಾಡ: ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಧಾರವಾಡದ ಎಸ್.ಡಿ.ಎಂ. ದಂತ ಮಹಾವಿದ್ಯಾಲಯಕ್ಕೆ ನೂತನ ಹವಾನಿಯಂತ್ರಿತ ಸಂಚಾರಿ ದಂತ ಚಿಕಿತ್ಸಾಲಯವನ್ನು ನೀಡಲಾಯಿತು. ಸುಮಾರು ೭೦ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸಂಚಾರಿ ದಂತ ಚಿಕಿತ್ಸಾಲಯದೊಳಗೆ ದಂತ ಪರೀಕ್ಷೆ, ಶುಚಿಗೊಳಿಸುವಿಕೆ, ದಂತ ಬೆರ್ಪಡಣೆ, ಎಕ್ಸ್-ರೇ ಹಾಗೂ ಬಾಯಿಯ ರೋಗ ತಡೆಗಟ್ಟುವ ವಿಧಾನ ಮುಂತಾದ ವ್ಯವಸ್ಥೆಗಳಿವೆ. ಇದರ ಜೊತೆಗೆ ೧೦ ರಿಂದ ೧೨ ಜನ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಶೌಚಾಲಯ ಮತ್ತು ಜನರೇಟರ್ ಅಳವಡಿಸುವ ವ್ಯವಸ್ಥೆಯನ್ನು ಹೊಂದಿದೆ.
ಈ ಸುಸಜ್ಜಿತ ಸಂಚಾರಿ ಚಿಕಿತ್ಸಾಲಯದ ನೆರೆವಿನಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಸೂಕ್ತ ಚಿಕಿತ್ಸೆ ಕೊಟ್ಟು ಗ್ರಾಮೀಣ ಭಾಗದ ಜನರ ಬಾಯಿಯ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಲಿದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ನಿರಂಜನ್ ಕುಮಾರ್ ಅವರ ಮಾರ್ಗದರ್ಶನದಂತೆ, ಎಸ್.ಡಿ.ಎಂ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಲರಾಮ ನಾಯ್ಕ ಅವರು ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂಚಾರಿ ಬಸ್ಸನ್ನು ಧರ್ಮಸ್ಥಳದಲ್ಲಿ ಪಡೆದುಕೊಂಡರು.