ಎಟಿಎಫ್‌ ಬೆಲೆ ಏರಿಕೆ, ಎಲ್‌ಪಿಜಿ ದರ ಇಳಿಕೆ

ಎಟಿಎಫ್‌ ಬೆಲೆ ಏರಿಕೆ, ಎಲ್‌ಪಿಜಿ ದರ ಇಳಿಕೆ

ವದೆಹಲಿ: ವಿಮಾನ ಇಂಧನ (ಎಟಿಎಫ್‌) ದರವನ್ನು ಮಂಗಳವಾರ ಶೇಕಡ 4.2ರಷ್ಟು ಹೆಚ್ಚಿಸಲಾಗಿದೆ. ಇದೇ ವೇಳೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ₹ 115.5ರಷ್ಟು ಇಳಿಕೆ ಮಾಡಲಾಗಿದೆ.

ಎಟಿಎಫ್‌ ದರವು ದೆಹಲಿಯಲ್ಲಿ ಪ್ರತಿ ಕಿಲೋ ಲೀಟರ್‌ಗೆ ₹ 4,842ರಷ್ಟು ಹೆಚ್ಚಳವಾಗಿದ್ದು, ₹ 1.20 ಲಕ್ಷಕ್ಕೆ ತಲುಪಿದೆ.

ದೆಹಲಿಯಲ್ಲಿ ವಾಣಿಜ್ಯ ಬಳಕೆ ಎಲ್‌ಪಿಜಿ ದರವು ಮಂಗಳವಾರದ ಇಳಿಕೆಯ ನಂತರದಲ್ಲಿ ಪ್ರತಿ ಸಿಲಿಂಡರ್‌ಗೆ ₹ 1,744ಕ್ಕೆ ತಲುಪಿದೆ.

ಜೂನ್‌ ನಂತರದಲ್ಲಿ ವಾಣಿಜ್ಯ ಬಳಕೆ ಎಲ್‌ಪಿಜಿ ದರ ಇಳಿಕೆಯಾಗುತ್ತಿರುವುದು ಇದು ಏಳನೆಯ ಬಾರಿ. ಮನೆಗಳಲ್ಲಿ ಬಳಸುವ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಬದಲಾವಣೆ ಆಗಿಲ್ಲ.