ಎಕ್ಸಾಂ ಬರೆಯಲು ಬಂದು ಪ್ರಜ್ಞೆ ತಪ್ಪಿ ಬಿದ್ದ ವಿದ್ಯಾರ್ಥಿ!. ಇದಕ್ಕೆ ಕಾರಣ ಕೇಳಿದ್ರೆ, ನೀವೂ ಶಾಕ್ ಆಗ್ತೀರ!

ನಳಂದಾ: 12ನೇ ತರಗತಿಯ ಬಾಲಕನೊಬ್ಬ ಎಕ್ಸಾಂ ಬರೆಯಲು ಪರೀಕ್ಷಾ ಕೊಠಡಿಗೆ ಬಂದಿದ್ದಾನೆ. ಈ ವೇಳೆ, ಆ ಕೊಠಡಿಯಲ್ಲಿದ್ದ ಹುಡುಗಿಯರ ದಂಡು ಕಂಡು ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಷರೀಫ್‌ನ ಅಲ್ಲಮ ಇಕ್ಬಾಲ್ ಕಾಲೇಜಿನ ಈ ವಿದ್ಯಾರ್ಥಿ ಬ್ರಿಲಿಯಂಟ್ ಶಾಲೆಯಲ್ಲಿ ಮಧ್ಯಂತರ ಪರೀಕ್ಷೆಯನ್ನು ತೆಗೆದುಕೊಳ್ಳಲು ಹೋಗಿದ್ದನು.
ಹುಡುಗ ಮೂರ್ಛೆ ಹೋದ ನಂತ್ರ ಜ್ವರ ಕಾಣಿಸಿಕೊಂಡಿತ್ತ. ಅಗ ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಸ್ಥಿತಿ ಸ್ಥಿರವಾಗಿದೆ.