ಉನ್ನಾವೋದಲ್ಲಿ ದುಃಖದ ಛಾಯೆ: ನಿಯಂತ್ರಣ ತಪ್ಪಿದ ಟ್ರಕ್‌ನಿಂದ ನಡೆದೇ ಹೋಯ್ತು ಅನಾಹುತ

ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ಅಗಫಾಗತದಲ್ಲಿ ತಾಯಿ, ಮಗಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ. ಲಕ್ನೋ-ಕಾನ್ಪುರ ಹೆದ್ದಾರಿಯ ಆಜಾದ್ ಮಾರ್ಗ್ ಕ್ರಾಸಿಂಗ್ ಬಳಿ ಟ್ರಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಸಾಗುತ್ತಿದ್ದ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ನಿಯಂತ್ರಣ ತಪ್ಪಿದ ಟ್ರಕ್ ಮೊದಲು ಕಾರು ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆಯಲ್ಲಿದ್ದ ಪಾದಚಾರಿಗಳ ಮೇಲೆ ಹರಿದು, ಈ ಸಮಯದಲ್ಲಿ ವಾಹನವೊಂದನ್ನು ಕಾಲುವೆಗೆ ಎಳೆದೊಯ್ದಿದೆ. ಈ ಅಪಘಾತದಲ್ಲಿ ತಂದೆ, ಮಗ ಮತ್ತು ಅಳಿಯ ಮೃತಪಟ್ಟಿದ್ದಾರೆ. ಅಪಘಾತದ ನಂತರ ಗ್ರಾಮಸ್ಥರು ಹೆದ್ದಾರಿ ತಡೆದು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಿಂದ ಬಸ್ ಧ್ವಂಸಗೊಂಡಿದ್ದು, ತಡೆಯಲು ಮುಂದಾದ ಕಾನ್ ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಅಪಘಾತದಲ್ಲಿ ಹಲವರು ಕಾರಿನಲ್ಲಿ ಸಿಲುಕಿಕೊಂಡಿದ್ದು, ಕ್ರೇನ್ ಸಹಾಯದಿಂದ ಅವರನ್ನು ಸುರಕ್ಷಿತವಾಗಿ ಹೊರತರಲು ಪ್ರಯತ್ನಿಸುತ್ತಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದಿಂದ ಉನ್ನಾವೋ ದುಃಖದ ಛಾಯೆ ಆವರಿಸಿದೆ.