ಸ್ಥಳೀಯರ ಉಪಸ್ಥಿತಿಯಲ್ಲಿ ಸ್ವಸ್ಥಾನಕ್ಕೆ ಮರಳಿದ ಪಟ್ಟೆ ತಲೆ ಹೆಬ್ಬಾತುಗಳು

ಮೈಸೂರು: ಕಳೆದ ಎರಡು ದಿನಗಳ ಹಿಂದೆ ಅನ್ಯ ವ್ಯಕ್ತಿಗಳು ನಮ್ಮ ಕೆರೆಯ ಅಥಿತಿಗಳಾದ ಪಟ್ಟೆ ತಲೆ ಹೆಬ್ಬಾತುಗಳನ್ನು ಉರುಳುಹಾಕಿ (ರಿಂಗ್ ಟ್ರ್ಯಾಪ್) ಸೆರೆಹಿಡುತ್ತಿದ್ದನ್ನು ನಮ್ಮೂರ ಗ್ರಾಮಸ್ಥರು ಗಮನಿಸಿದ್ದು ಪ್ರಶ್ನಿಸುವಷ್ಟರಲ್ಲಿ ಅಲ್ಲಿಂದ ಕಲ್ಕಿತ್ತಿದ್ದಾ
ತಡ ರಾತ್ರಿ ಅರಣ್ಯ ಇಲಾಖೆ ಸಂಚಾರಿ ದಳ ಖಚಿತ ವಾಹಿತಿ ಮೇರೆಗೆ ನಟ ದರ್ಶನ್ ರವರ ತೋಟದಲ್ಲಿ ಶೋಧ ಕಾರ್ಯ ನಡೆಸಿ ನಾಲ್ಕು ವಿದೇಶೀ ಹಕ್ಕಿಗಳಾದ 'ಬಾರ್ ಹೇಡೆಡ್ ಗೂಸ್' ಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ವಿಶೇಷ ಪ್ರಭೇದ ಹಕ್ಕಿಗಳೆಂದು ಸ್ವಸ್ಥಾನವಾದ ಹದಿನಾರು ಕೆರೆಗೆ ಮರಳಿ ಬಿಡಲು ನ್ಯಾಯಾಲಯದ ಮೂಲಕ ಅನುಮತಿ ಪಡೆದು ತದನಂತರ ಎಲ್ಲಾ ರೀತಿಯ ವೈದ್ಯಕೀಯ ತಪಾಸಣೆ ಒಳಪಡಿಸಿ ಶನಿವಾರ ಸಂಜೆ 6.15 ಸಮಯದಲ್ಲಿ ಹದಿನಾರು ಕೆರೆಯಲ್ಲಿ ಅರಣ್ಯ ಇಲಾಖೆಯ ಸ್ಥಳೀಯರ ಉಪಸ್ಥಿತಿಯಲ್ಲಿ ಸಂರಕ್ಷಿಸಿ ಸುರಕ್ಷಿತವಾಗಿ ಸ್ವಸ್ಥಾನಕ್ಕೆ ಮರಳಿ ಬಿಡಲಾಯಿತು.