ಉತ್ತರಪ್ರದೇಶದಲ್ಲಿ ನೀರು ಸರಬರಾಜು ವಿಚಾರಕ್ಕೆ ವೃದ್ಧೆಯೊಬ್ಬಳಿಗೆ ಹಿಗ್ಗಾಮುಗ್ಗಾ ಥಳಿತಪ್ರಕರಣ ದಾಖಲು

ಉತ್ತರಪ್ರದೇಶದಲ್ಲಿ ನೀರು ಸರಬರಾಜು ವಿಚಾರಕ್ಕೆ ವೃದ್ಧೆಯೊಬ್ಬಳಿಗೆ ಹಿಗ್ಗಾಮುಗ್ಗಾ ಥಳಿತಪ್ರಕರಣ ದಾಖಲು

ತ್ತರಪ್ರದೇಶ : ನೀರು ಸರಬರಾಜಿಗೆ ಸಂಬಂಧಿಸಿ ನೆರೆಹೊರೆಯವರೊಂದಿಗೆ ವಾಗ್ವಾದ ನಡೆಸಿದ ನಂತ್ರ ವೃದ್ಧೆಯನ್ನು ಅಮಾನುಷವಾಗಿ ಹಲ್ಲೆಗೈದ ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯ ಹಳ್ಳಿಯಲ್ಲಿ ಬುಧವಾರ ಘಟನೆ ನಡೆದಿದೆ.

ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ ಎಂದು ವರದಿಯಾಗಿದೆ.

ಮಹಿಳೆ ಅಸಹಾಯಕಳಾಗಿ ನೆಲದ ಮೇಲೆ ಮಲಗಿದ್ದಾಗ ಪುರುಷನೊಬ್ಬ ಆಕೆಯನ್ನು ನಿಂದಿಸಿ ಒದೆಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸುತ್ತದೆ. ಆತ ಪದೇ ಪದೇ ಮಹಿಳೆಯ ಮುಖಕ್ಕೆ ಒದೆಯುತ್ತಿರುವುದು ಕಂಡು ಬರುತ್ತಿದೆ. ತನ್ನ ಮನೆಯ ಹೊರಗಿನ ನೀರಿನ ಟ್ಯಾಂಕ್‌ಗೆ ಪೈಪ್ ಜೋಡಿಸಲು ಪ್ರಯತ್ನಿಸುತ್ತಿದ್ದಾಗ ಮಹಿಳೆ ಮತ್ತು ಆಕೆಯ ನೆರೆಹೊರೆಯವರ ನಡುವೆ ವಾಗ್ವಾದ ನಡೆದಿದೆ. ಇತರ ನೆರೆಹೊರೆಯವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ವ್ಯಕ್ತಿಯೊಬ್ಬ ಅವಳನ್ನು ನಿಂದಿಸಲು ಮತ್ತು ಒದೆಯಲು ಪ್ರಾರಂಭಿಸಿದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.