ಇನ್ನೊಂದು ವಾರ ಸದನ ವಿಸ್ತರಿಸಬೇಕಿತ್ತು: ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅಸಮಾಧಾನ

ಇನ್ನೊಂದು ವಾರ ಸದನ ವಿಸ್ತರಿಸಬೇಕಿತ್ತು: ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅಸಮಾಧಾನ

ಸುವರ್ಣಸೌಧ (ಬೆಳಗಾವಿ): ರಾಜ್ಯದಲ್ಲಿ‌ಜ್ವಲಂತ ಸಮಸ್ಯೆಗಳಿವೆ. ನಾವು ಇನ್ನೊಂದು ವಾರ ಮುಂದೂಡಲು ಕೇಳಿಕೊಂಡೆವು. ನಮ್ಮ ಶಾಸಕರಿಗೆ ಮಾತನಾಡಲು‌ ಅವಕಾಶ ಸಿಗಲಿಲ್ಲ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಸಾಧನೆ ಮತಾಂತರ ವಿಧೇಯಕ ಪಾಸ್ ಮಾಡಿದ್ದಷ್ಟೇ.

ಹಿಂದೆ ನೂರು ದಿನ ಕಲಾಪ ನಡೆಸಿದ ಇತಿಹಾಸವಿದೆ. 60 ದಿನ ಸದನ ನಡೆಸುವ ನಿಯಮ ಮಾಡಿಕೊಂಡಿದ್ದರು. ಆದರೆ 10 ದಿನದ ಕಲಾಪದಲ್ಲಿ ಏನು ನಡೆಯಲಿಲ್ಲ. ಯಾವುದಕ್ಕೂ ಸರಿಯಾದ ಉತ್ತರ ಸಿಗಲಿಲ್ಲ ಎಂದರು. ಸದನದಲ್ಲಿ ಐವರು ಮಂತ್ರಿಗಳೂ ಇರಲಿಲ್ಲ. ಬಿಲ್ ಪಾಸ್ ಮಾಡುವಾಗಷ್ಟೇ ಎಲ್ಲರೂ ಇದ್ದರು. ನೂರು ದಿನ ಕಲಾಪ ನಡೆಸುವಂತೆ ಹೇಳಿದ್ದೇವೆ. ಪ್ರತಿಪಕ್ಷ ನಾಯಕರ ಮಾತಿಗೆ ಸಮಯ ಸಿಗಲಿಲ್ಲ. ಪ್ರತಿಭಟನೆ ಮಾಡಿ ಸಮಯ ಕೇಳುವಂತಾಯಿತು. ಇನ್ನೊಂದು ವಾರ ಸದನ ವಿಸ್ತರಿಸಬೇಕಿತ್ತು ಎಂದು ಶಿವಲಿಂಗೇಗೌಡ ಅಸಮಾಧಾನ ತೋಡಿಕೊಂಡರು.