ಅಯ್ಯೋ ದುರ್ವಿಧಿಯೇ! ಮದುವೆಯಾದ ಮೂರೇ ದಿನದಲ್ಲಿ ದುರಂತ ಅಂತ್ಯ ಕಂಡ ನವದಂಪತಿ

ಅಯ್ಯೋ ದುರ್ವಿಧಿಯೇ! ಮದುವೆಯಾದ ಮೂರೇ ದಿನದಲ್ಲಿ ದುರಂತ ಅಂತ್ಯ ಕಂಡ ನವದಂಪತಿ

ಭುವನೇಶ್ವರ್​: ಮದುವೆಯಾದ ಮೂರೇ ದಿನದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿ ದುರಂತ ಸಾವಿಗೀಡಾಗಿರುವ ಘಟನೆ ಒಡಿಶಾದ ಬೆರ್ಹಾಂಪುರ್​ನಲ್ಲಿ ನಡೆದಿದೆ.

ಮೃತರನ್ನು ಬೆರ್ಹಾಂಪುರ್​ ಮೂಲದ ಸಿ.ಎಚ್​. ಪ್ರನೇತಾ ಮತ್ತು ಆಂಧ್ರ ಪ್ರದೇಶದ ಇಚ್ಚಫುರ್​​ ಮೂಲದ ಜಿ ಬೆನು ಎಂದು ಗುರುತಿಸಲಾಗಿದೆ.

ಅಪಘಾತದಿಂದ ಗಾಯಗೊಂಡಿದ್ದ ಇಬ್ಬರು ಬೆರ್ಹಾಂಪುರ್​ನಲ್ಲಿರುವ ಎಂಕೆಚಿಜಿ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಫೆ. 10ರಂದು ಪ್ರನೇತಾ ಮತ್ತು ಬೆನು ಮದುವೆಯಾಗಿದ್ದರು. ಇದಾದ ಮೂರು ದಿನಗಳ ಬಳಿಕ ಇಬ್ಬರು ಬೈಕ್​ನಲ್ಲಿ ಬೆರ್ಹಾಂಪುರ್​ಗೆ ಬೈಕ್​ನಲ್ಲಿ ಬರುತ್ತಿದ್ದರು. ಗೋಲಂತರ ಪೊಲೀಸ್ ಠಾಣೆ ಎದುರಿನ ತಿರುವಿನಲ್ಲಿ ಎದುರಿಗೆ ಬಂದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದಿದೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಅವರು ಬದುಕುಳಿಯಲಿಲ್ಲ.

ಟ್ರ್ಯಾಕ್ಟರ್​ ಚಾಲಕ ಪರಾರಿಯಾಗಿದ್ದು, ಗೋಲಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಚಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ನವದಂಪತಿಯನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.