ಅಧ್ಯಕ್ಷೀಯ ಚುನಾವಣೆ: ಖರ್ಗೆ ಪರ ರಾಜ್ಯ ಕಾಂಗ್ರೆಸಿಗರ ಮತ ಚಲಾವಣೆ

ಅಧ್ಯಕ್ಷೀಯ ಚುನಾವಣೆ: ಖರ್ಗೆ ಪರ ರಾಜ್ಯ ಕಾಂಗ್ರೆಸಿಗರ ಮತ ಚಲಾವಣೆ

ಬೆಂಗಳೂರು: ಕಾಂಗ್ರೆಸ್ ಗೆ ಕಾರ್ಯಕರ್ತರೇ ಬಲ. ಗಾಂಧಿ ಕುಟುಂಬದ ಬೆಂಬಲವಿದೆ ಎಂಬುದೊಂದೆ ನನ್ನ ಚುನಾವಣಾ ವಿಚಾರವಲ್ಲ ಎಂದು ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಆರಂಭವಾಗುವುದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದು ಕಾಂಗ್ರೆಸ್ ನ ಆಂತರಿಕ ಚುನಾವಣೆ.

ಪ್ರಜಾಪ್ರಭುತ್ವ ರೀತಿ ಚುನಾವಣೆಯಾಗುತ್ತಿದೆ. ಫಲಿತಾಂಶದ ಬಳಿಕ ನನ್ನ ಕಾರ್ಯ ಚಟುವಟಿಕೆ ಹೇಗಿರುತ್ತದೆ ಎಂದು ಹೇಳುತ್ತೇನೆ ಎಂದರು.

ಇದು ಫ್ರೆಂಡ್ಲಿ ಮ್ಯಾಚ್. ನಾನು ಶಶಿ ತರೂರ್ ಅವರಿಗೆ, ಶಶಿ ತರೂರು ನನಗೆ ಶುಭ ಹಾರೈಸಿದ್ದಾರೆ. ಅವರ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಗಾಂಧಿ ಕುಟುಂಬದ ಬೆಂಬಲವಿದೆ ಎಂಬ ಕಾರಣಕ್ಕೆ ಮಾತ್ರ ಸ್ಪರ್ಧೆ ಮಾಡುತ್ತಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನ 476 ಸದಸ್ಯರು, ಶಾಸಕಾಂಗ ಪಕ್ಷದ 17 ಸದಸ್ಯರು ಮತ ಚಲಾಯಿಸಲಿದ್ದಾರೆ. ಇದೇ ತಿಂಗಳು 29 ರಂದು ಫಲಿತಾಂಶ ಪ್ರಕಟವಾಗಲಿದೆ. ಬಹುತೇಕ ಎಲ್ಲ ಪ್ರದೇಶ ಕಾಂಗ್ರೆಸ್ ಸಮಿತಿ ಖರ್ಗೆ ಪರವಾಗಿ ಇದ್ದು, ಅವರ ಗೆಲುವು ಬಹುತೇಕ ನಿಶ್ಚಿತವಾಗಿದೆ.