ಅತ್ಯಾಚಾರಗೈದು ವೀಡಿಯೋ ಅಪ್ಲೋಡ್ ಬೆದರಿಕೆ: ಆರೋಪಿಗೆ 15 ವರ್ಷ ಜೈಲು ಶಿಕ್ಷೆ
ಕೈಕಂಬ: ಬಾಲಕಿಯನ್ನು ಅತ್ಯಾಚಾರಗೈದು, ಆ ಕೃತ್ಯವನ್ನು ವೀಡಿಯೋ ಚಿತ್ರೀಕರಣ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದ ಆರೋಪಿಗೆ ನ್ಯಾಯಾಲಯವು 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
201ರಲ್ಲಿ ಬಾಲಕಿ ನೀಡಿದ್ದ ದೂರಿನಂತೆ ಬಜಪೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆರೋಪಿ ತೋಡಾರ್ ಗ್ರಾಮದ ಸೀತಾರಾಮ (26)ನನ್ನು ಬಂಧಿಸಿದ್ದರು.
ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ-2 ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಅ. 3ರಂದು ಆರೋಪಿ ತೋಡಾರ್ ಗ್ರಾಮದ ಸೀತಾರಾಮ (26)ನಿಗೆ 15 ವರ್ಷಗಳ ಜೈಲು ಮತ್ತು 50 ಸಾವಿರ ರೂಪಾಯಿ ದಂಡವನ್ನು ವಿಧಿಸಿ, 2ನೇ ಆರೋಪಿ ನಾರಾಯಣನನ್ನು ಖುಲಾಸೆಗೊಳಿಸಿದ್ದಾರೆ.