ಅಂದು ಕಾಪಿ ಹೊಡೆಯುವುದರಲ್ಲಿ ಪಿಹೆಚ್‌ಡಿ, ಇಂದು ಭ್ರಷ್ಟಾಚಾರದಲ್ಲಿ ಪಿಹೆಚ್‌ಡಿ: ಸಚಿವ ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ವಾಗ್ಧಾಳಿ

ಬೆಂಗಳೂರು: ಬಿಜೆಪಿಯಲ್ಲಿ ( BJP ) ರೌಡಿ ಮೋರ್ಚಾಗೆ ಮನ್ನಣೆ ಸಿಗುತ್ತಿರುವಾಗ ಬಿಜೆಪಿಗರು ಒಬ್ಬೊಬ್ಬರಾಗಿಯೇ ನಾನೂ ರೌಡಿಯಾಗಿದ್ದೆ, ನಾನೂ ಗೂಂಡಾಗಿರಿ ಮಾಡಿದ್ದೆ ಎಂದು ತಮ್ಮ ಅರ್ಹತೆಗಳನ್ನು ಮುಂದಿಡುತ್ತಿದ್ದಾರೆ. ಬಿ.ಶ್ರೀರಾಮುಲು ಅವರು ಅಂದು ಕಾಪಿ ಹೊಡೆಯುವುದರಲ್ಲಿ ಪಿಹೆಚ್‌ಡಿ ಮಾಡಿದ್ದರು ಇಂದು ಭ್ರಷ್ಟಾಚಾರದಲ್ಲಿ ಪಿಹೆಚ್‌ಡಿ ಮಾಡಿದ್ದಾರೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.