ಅಂಡಮಾನ್ ಸಮುದ್ರದ ಬಳಿ 4.9 ತೀವ್ರತೆಯ ಭೂಕಂಪ |

ಪೋರ್ಟ್ ಬ್ಲೇರ್ (ಅಂಡಮಾನ್ ಮತ್ತು ನಿಕೋಬಾರ್) : ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಅಂಡಮಾನ್ ಸಮುದ್ರದ ಬಳಿ ಇಂದು ಮುಂಜಾನೆ 4.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ(National Center for Seismology-NCS) ತಿಳಿಸಿದೆ.
ʻಮಂಗಳವಾರ ಮುಂಜಾನೆ 3:40 ರ ಸುಮಾರಿಗೆ ಅಂಡಮಾನ್ ಸಮುದ್ರದ ಬಳಿ ಭೂಮಿಯಿಂದ 77 ಕಿಮೀ ಆಳದಲ್ಲಿ 4.9 ತೀವ್ರತೆಯ ಭೂಕಂಪ ಸಂಭವಿಸಿದೆʼ ಎಂದು NCS ಟ್ವೀಟ್ ಮಾಡಿದೆ.