10ನೇ ದಿನಕ್ಕೆ ಕಾಲಿಟ್ಟ, ಅಂಗನವಾಡಿ ಕಾರ್ಯಕರ್ತೆಯ ಆಹೋರಾತ್ರಿ ಧರಣಿ : ಇಂದು ಸಿಎಂ ಮನೆಗೆ ಮುತ್ತಿಗೆ

10ನೇ ದಿನಕ್ಕೆ ಕಾಲಿಟ್ಟ, ಅಂಗನವಾಡಿ ಕಾರ್ಯಕರ್ತೆಯ ಆಹೋರಾತ್ರಿ ಧರಣಿ : ಇಂದು ಸಿಎಂ ಮನೆಗೆ ಮುತ್ತಿಗೆ

ಬೆಂಗಳೂರು : ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಂದ (Anganwadi Workers ) ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಇಂದು 10ನೇ ದಿನಕ್ಕೆ ಕಾಲಿಟ್ಟಿದೆ. ಆಹೋರಾತ್ರಿ ಧರಣಿ ನಡೆಸಿದ್ರು ಬೇಡಿಕೆ ಇಡೇರಿಸಿದ ಹಿನ್ನೆಲೆ ಇಂದು ಸಿಎಂ ಮನೆಗೆ ಮುತ್ತಿಗೆ ಹಾಕಲು ನಿರ್ಧಾರಿಸಲಾಗಿದೆ.

ನಗರದ ಫ್ರೀಡಂಪಾರ್ಕ್ನಲ್ಲಿ ಕಳೆದ ನಾಲ್ಕು ದಿನಗಳಿಂದ ರಸ್ತೆಯಲ್ಲೇ ಚಳಿಯ ನಡುವೆಯೂ ಮಲಗಿ ಅಹೋ ರಾತ್ರಿ ಧರಣಿ ನಡೆಸುತ್ತಿದ್ದಾರೆ. 10 ದಿನದೊಳಗೆ ಬೇಡಿಕೆ ಈಡೇರಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರಾತ್ರಿ ವೇಳೆ ಅಂಗನವಾಡಿ ಕಾರ್ಯಕರ್ತರು ತಮ್ಮ ಲಗೇಜು ಸಮೇತ ರಸ್ತೆಯಲ್ಲೇ ಮಲಗುತ್ತಿದ್ದಾರೆ. .ಫ್ರೀಡಂ ಪಾರ್ಕ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸುವ ಮೂಲಕ ಪ್ರತಿಭಟಿಸುತ್ತಿದ್ದಾರೆ.

ಗುಜರಾತ್ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುವಿಟಿ ಯೋಜನೆ ಜಾರಿ ಮಾಡಿದ್ದು, ಕರ್ನಾಟಕದಲ್ಲೂ ಸರ್ಕಾರ ಜಾರಿ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟಿಸುತ್ತಿದ್ದಾರೆ. ಇದಲ್ಲದೇ ವೇತನ ಹೆಚ್ಚಳ ಸೇರಿ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದಾರೆ.