ಸ್ಯಾಂಟ್ರೋ ರವಿ ಬಗ್ಗೆ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದೇನು

ಸ್ಯಾಂಟ್ರೋ ರವಿ ಬಗ್ಗೆ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದೇನು

ಬೆಂಗಳೂರು, ಜನವರಿ 6: ವಿಧಾನಸೌಧದಲ್ಲಿ 10 ಲಕ್ಷ ರೂಪಾಯಿ ಹಣ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ, ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ತಿಳಿಸಿದರು.

ಈ ಕುರಿತು ಶುಕ್ರವಾರ ವಿಕಾಸಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಬಳಿ ನಗದು ಪತ್ತೆಯಾದ ಹಿನ್ನೆಲೆಯಲ್ಲಿ

ಆತನನ್ನು ಬಂಧಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆದು ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುದು ಎಂದು ಹೇಳಿದರು.

ಇನ್ನೂ ಬಂಧನಕ್ಕೆ ಒಳಗಾದ ವ್ಯಕ್ತಿಯ ಬಳಿ ಇದ್ದ ಹಣಕ್ಕೆ ಸೂಕ್ತ ದಾಖಲಾತಿ ಕೊಡದಿದ್ರೆ, ಕ್ರಮ‌ ಆಗಲಿದೆ. ನಾನು ಇದರ ಹೊಣೆ ಹೊತ್ಕೊಳ್ಳೋದಿಲ್ಲ.‌ ನನಗೆ ಹಣ ಕೊಡೋಕೆ ಬಂದಿದ್ರು ಅಂತ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಹಾಗಾದರೆ,‌ ಸಿದ್ದರಾಮಯ್ಯ ಅವರಿಗೇ ಹಣ ಕೊಡೋದಿಕ್ಕೆ ಆತ ಬಂದಿರಬಹುದು ಅಂತ ನಾನೂ ಹೇಳಬಹುದಲ್ವಾ? ಎಂದು ಮರು ಪ್ರಶ್ನಿಸಿದರು.

ನಾನು ಈ ಪ್ರಕರಣದಲ್ಲಿ ಯಾರ ಮೇಲೂ ಒತ್ತಡ ಹಾಕಿಲ್ಲ. ಹಣ ಕೊಡೋದು ಇದ್ದಿದ್ರೆ ವಿಧಾನಸೌಧಕ್ಕೇ ಬರಬೇಕಿತ್ತಾ? ನಮಗೂ ಆತನಿಗೂ ಸಂಬಂಧ ಇಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ಸ್ಯಾಂಟ್ರೋ ರವಿ ಯಾರು ನಂಗೆ ಗೊತ್ತಿಲ್ಲ

ಇನ್ನು ಸ್ಯಾಂಟ್ರೋ ರವಿ ಜೊತೆ ಬಿಜೆಪಿ ನಾಯಕರು ಸಂಪರ್ಕ ವಿಚಾರವಾಗಿ ಮಾತನಾಡಿ, ಸ್ಯಾಂಟ್ರೋ ರವಿ ಯಾರು ನಂಗೆ ಗೊತ್ತಿಲ್ಲ. ನಿನ್ನೆ ಅವರ ಹೆಸರನ್ನು ನಾನು ಕೇಳಿದ್ದು ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಹೇಳಿದರು. ಅಲ್ಲದೇ ರವಿ ಕೆಕೆ ಗೆಸ್ಟ್ ಹೌಸ್ ರಲ್ಲಿ ಉಳಿದುಕೊಂಡಿದ್ದರು. ಆದರೆ ‌ಕೆಕೆ ಗೆಸ್ಟ್ ಹೌಸ್ ಡಿಪಿಆರ್ ವ್ಯಾಪ್ತಿಗೆ ಬರುತ್ತೆ. ನನ್ನ ಕ್ಷೇತ್ರದವರು ಯಾರಾದ್ರು ಬೆಂಗಳೂರಲ್ಲಿ ಆಸ್ಪತ್ರೆಗೆ ಅಂತ ಬಂದ್ರೆ ಅವರಿಗೆ ಎರಡು ದಿವಸಕ್ಕೆ ಕಾವೇರಿ ಗೆಸ್ಟ್ ಹೌಸ್ ಕೊಡಸಿದ್ದೇನೆ ಅಷ್ಟೇ ಎಂದರು.

ಪ್ರಭಾವಿ ರಾಜಕಾರಣಿಗಳ ಜೊತೆ ಸ್ಯಾಂಟ್ರೋ ರವಿ ಫೋಟೋ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದರು. ವಿವಾದದ ಹಿನ್ನಲೆಯಲ್ಲಿ ಲೋಕೋಪಯೋಗಿ ಅಧೀನದಲ್ಲಿ ಇರುವ ಕಾವೇರಿ ಗೆಸ್ಟ್‌ಹೌಸ್ ನಲ್ಲಿ ಉಳಿಕೊಂಡವರ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡವರ ವರದಿಯನ್ನು ಲೋಕೋಪಯೋಗಿ ಇಲಾಖೆ ಕೇಳಿದೆ.

ಗೆಸ್ಟ್ ಹೌಸ್ ನಲ್ಲಿ ಯಾರೆಲ್ಲಾ ಇದ್ದಾರೆ? ಎಷ್ಟು ಸಮಯದಿಂದ ಇದ್ದಾರೆ ಎಂಬ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ‌ ಪಾಟೀಲ್ ತಿಳಿಸಿದರು.

ಹಿನ್ನೆಲೆ ಏನು.. ?

ವಿಧಾನಸೌಧದ ಮುಂದೆ ದೊಡ್ಡದಾಗಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ನಮೂದು ಮಾಡಿದ್ದರೂ, ಅಲ್ಲಿ ನಡೆಯುವುದು ಬರೀ ಭ್ರಷ್ಟಾಚಾರ, ಹಣ ನೀಡಿದರೇ ಮಾತ್ರ ಕೆಲಸ ಎನ್ನುವುದು ಸಮಾನ್ಯ ಸಾರ್ವಜನಿಕರ ದೂರು ಆಗಿದೆ. ಆದಕ್ಕೆ ಪೂರಕ ಎಂಬಂತೆ ಬುಧವಾರ ಸಂಜೆ ವಿಧಾನಸೌಧದಲ್ಲಿ ಅಧಿಕೃತ ದಾಖಲೆಗಳಿಲ್ಲದ 10 ಲಕ್ಷ ರೂ. ನಗದು ಹಣ ತೆಗೆದುಕೊಂಡು ಹೋಗುತ್ತಿದ್ದ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ ಅವರಿಂದ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದಾರೆ. ಈ ಪ್ರಕರಣ ಚುನಾವಣೆ ಹೊತ್ತಲ್ಲಿ ರಾಜಕೀಯ ಕೆಸರೆರಚಾರಕ್ಕೆ ಕಾರಣವಾಗಿದೆ.