ಶ್ರದ್ಧಾ ವಾಕರ್ ಹತ್ಯೆ ಮಾದರಿಯಲ್ಲೇ ಬಾಂಗ್ಲಾದಲ್ಲೊಂದು ಘಟನೆ: ಪ್ರೇಯಸಿಯನ್ನು ತುಂಡರಿಸಿ ಚರಂಡಿಗೆ ಎಸೆದ ಪಾಪಿ
ನವದೆಹಲಿ: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಘೋರ ವಿವರಗಳು ಬೆಳಕಿಗೆ ಬರುತ್ತಿರುವಂತೆಯೇ ಬಾಂಗ್ಲಾದೇಶದಲ್ಲಿ ಹಿಂದೂ ಯುವತಿಯೊಬ್ಬಳನ್ನು ವಿವಾಹಿತ ಪ್ರೇಮಿ ಅಬು ಬಕರ್ ಶಿರಚ್ಛೇದ ಮಾಡಿರುವ ಘಟನೆ ವರದಿಯಾಗಿದೆ.
ನವೆಂಬರ್ 7 ರಂದು ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯ ಸೋನಾದಂಗಾದಲ್ಲಿ ಕವಿತಾ ರಾಣಿ ಎಂಬ ಮಹಿಳೆಯನ್ನು ಮುಸ್ಲಿಂ ವ್ಯಕ್ತಿ ಅಬು ಬಕರ್ ಶಿರಚ್ಛೇದ ಮಾಡಿದ್ದಾನೆ.
ನಂತರ ಆತನನ್ನು ಕ್ಷಿಪ್ರ ಕಾರ್ಯಾಚರಣೆ ಪಡೆ ಬಂಧಿಸಿತ್ತು.
ಅಬು ಬಕರ್ ಯುವತಿಯನ್ನು ಏಕೆ ಕೊಂದನು?
ವಾಯ್ಸ್ ಆಫ್ ಬಾಂಗ್ಲಾದೇಶ ಹಿಂದೂಗಳ ಪೋಸ್ಟ್ ಪ್ರಕಾರ, ಅಬೂಬಕರ್ ಈಗಾಗಲೇ ಮದುವೆಯಾಗಿದ್ದಾನೆಂದು ಕವಿತಾಗೆ ತಿಳಿದ ಬಳಿಕ ಕವಿತಾ ಮತ್ತು ಅಬು ನಡುವೆ ಜಗಳ ಶುರುವಾಗಿದೆ. ಇವರಿಬ್ಬರ ಜಗಳ ಕವಿತಾ ಹತ್ಯೆಯಲ್ಲಿ ಕೊನೆಗೊಂಡಿತು. ಅಬು ಕವಿತಾಳ ಶಿರಚ್ಛೇದ ಮಾಡಿ, ಆಕೆಯ ದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ, ಮಾಂಸದ ತುಂಡುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಚರಂಡಿಗೆ ಎಸೆದಿದ್ದ.
ಶ್ರದ್ಧಾ ವಾಕರ್ ಹತ್ಯೆಯಂತೆಯೇ ಈ ಕೊಲೆ
28 ವರ್ಷದ ಅಫ್ತಾಬ್ ಅಮೀನ್ ಪೂನಾವಾಲಾ ತನ್ನ ಲಿವ್-ಇನ್ ಪಾಲುದಾರ ಶ್ರದ್ಧಾ ವಾಕರ್‌ನನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಛತ್ತರ್‌ಪುರ ಮತ್ತು ರಾಷ್ಟ್ರ ರಾಜಧಾನಿಯ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ವಿಲೇವಾರಿ ಮಾಡಿದ ದೆಹಲಿ ಕೊಲೆ ಪ್ರಕರಣದಂತೆಯೇ ಈ ಅಪರಾಧವೂ ಇದೆ.