ವಿಧಾನಸಭೆ ಕಲಾಪ ಕೆಲಕಾಲ ಮುಂದೂಡಿಕೆ

ವಿಧಾನಸಭೆ ಕಲಾಪ ಕೆಲಕಾಲ ಮುಂದೂಡಿಕೆ

ಬೆಳಗಾವಿ: ಜಿಲ್ಲೆಯ ಸುವರ್ಣಸೌಧದಲ್ಲಿ ಚಳಿಗಾಲದ ವಿಧಾನಮಂಡಲದ ಕಲಾಪ ನಡೆಯುತ್ತಿದೆ. ಇಂದು ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಪಕ್ಷಗಳಿಂದ ಗದ್ದಲ, ಕೋಲಾಹಲ ಏಳಿಸಿದ ಕಾರಣ, ಕೆಲ ಕಾಲ ಕಲಾಪವನ್ನು ಮುಂದೂಡಿಕೆ ಮಾಡಲಾಗಿದೆ. ಸದನದ ಭಾವಿಗೆ ಇಳಿದಂತ ವಿಪಕ್ಷಗಳ ಸದಸ್ಯರು, ಪ್ರತಿಭಟನೆ ಘೋಷಣೆಗಳನ್ನು ಕೂಗಿದರು. ಈ ಹಿನ್ನೆಲಯಲ್ಲಿ ಸ್ಪೀಕರ್ ಕೆಲ ಕಾಲ ವಿಧಾನಸಭೆಯ ಕಲಾಪವನ್ನು ಮುಂದೂಡಿಕೆ ಮಾಡಿದ್ದಾರೆ.