ರಾಜ್ಯದಲ್ಲಿ ಹೆಚ್ಚುತ್ತಿದೆ ಪೋಕ್ಸೋ ಪ್ರಕರಣಗಳುವಿಧಾನಪರಿಷತ್‌ ನಲ್ಲಿ ಆರಗ ಜ್ಞಾನೇಂದ್ರ ಹೇಳಿದ್ದೇನು

ರಾಜ್ಯದಲ್ಲಿ ಹೆಚ್ಚುತ್ತಿದೆ ಪೋಕ್ಸೋ ಪ್ರಕರಣಗಳುವಿಧಾನಪರಿಷತ್‌ ನಲ್ಲಿ ಆರಗ ಜ್ಞಾನೇಂದ್ರ ಹೇಳಿದ್ದೇನು

ಬೆಂಗಳೂರು: ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ವಿಧಾನಪರಿಷತ್‌ ಪ್ರಶ್ನಾವಳಿ ಕಲಾಪದಲ್ಲಿ ಎಂಎಲ್​ಸಿ ಗೋವಿಂದರಾಜು ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.ಸುಮಾರು 2022ರಲ್ಲಿ 3097 ಪೋಕ್ಸೋ ಪ್ರಕರಣಗಳು, 2021ರಲ್ಲಿ 2863 ಪೋಕ್ಸೋ ಕೇಸ್, 2020ರಲ್ಲಿ 2,166 ಪ್ರಕರಣಗಳು ದಾಖಲಾಗಿವೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಮೊದಲು ಪೋಕ್ಸೋ ಪ್ರಕರಣಗಳು ಠಾಣೆಗಳಲ್ಲಿ ರಿಪೋರ್ಟ್ ಆಗುತ್ತಿರಲಿಲ್ಲ . ಇದೀಗ ನೇರವಾಗಿ ಠಾಣೆಗೆ ಬಂದು ತಮ್ಮ ವಿರುದ್ಧ ನಡೆದ ದೌರ್ಜನ್ಯವನ್ನು ಹೇಳಿಕೊಳ್ಳುತ್ತಿದ್ದಾರೆ ಎಂದರು.
ಇದನ್ನ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಪೊಲೀಸ್​ ಠಾಣೆಗಳಲ್ಲೂ ಹೆಲ್ಪ್​ ಡೆಸ್ಕ್ ಮಾಡಿದ್ದೇವೆ. ಇದರಿಂದಾಗಿ ಸಂತ್ರಸ್ತರು ಮುಕ್ತವಾಗಿ ಠಾಣೆಗೆ ಬಂದು ಹೇಳಿಕೊಳ್ಳುವುದು ಹೆಚ್ಚಾಗುತ್ತಿದೆ.

ಮಕ್ಕಳ ಸುರಕ್ಷತೆಗಾಗಿ ರಾಜ್ಯದಲ್ಲಿ ಪಿಂಕ್ ಹೊಯ್ಸಳ ಕಾರ್ಯ ನಿರ್ವಹಿಸುತ್ತಿದೆ. ಬೆಂಗಳೂರು ನಗರದಲ್ಲಿ ನಿರ್ಭಯ ನಿಧಿಯಿಂದ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ 4 ಸಾವಿರ ಸಿಸಿಟಿವಿ ಅಳವಡಿಸಿದ್ದೇವೆ. ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣ ನಡೆದ 60 ದಿನಗಳ ಒಳಗಾಗಿ ಚಾರ್ಜ್​ಶೀಟ್ ಹಾಕುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಹೆಣ್ಣುಮಕ್ಕಳ ರಕ್ಷಣೆಗೆ ವಿಶೇಷವಾದ ಆದ್ಯತೆ ನೀಡುತ್ತಿದೆ ಎಂದರು.