ರಾಜ್ಯದ ಕರಡು ಮತದಾರರ ಪಟ್ಟಿ ಪ್ರಕಟ : 27 ಲಕ್ಷ ಮತದಾರರಿಗೆ ಕೊಕ್!

ರಾಜ್ಯದ ಕರಡು ಮತದಾರರ ಪಟ್ಟಿ ಪ್ರಕಟ : 27 ಲಕ್ಷ ಮತದಾರರಿಗೆ ಕೊಕ್!

ಬೆಂಗಳೂರು ; ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ವಿವಿಧ ಕಾರಣಕ್ಕೆ ಸುಮಾರು 27.08 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ.ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಫೋಟೋ ಸಿಮಿಲರ್ ಎಂಟ್ರಿಸ್ ಡೆಮೋಗ್ರಫಿಕ್ ಸಿಮಿಲರ್ ಎಂಟ್ರಿಸ್  ಮತದಾರರು ಮೃತಪಟ್ಟಿರುವು, ವಿಳಾಸ ಬದಲಾವಣೆ ಸೇರಿದಂತೆ ವಿವಿಧ ಕಾರಣಕ್ಕೆ ಮತದಾರರ ಹೆಸರನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ.

ಮತದಾರರ ಕರಡು ಪಟ್ಟಿಯಲ್ಲಿ ಹೊಸದಾಗಿ 11.13 ಲಕ್ಷ ಮತದಾರರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದ್ದು, 2022 ರ ಅಂತಿಮ ಮತದಾರರ ಪಟ್ಟಿಯಲ್ಲಿ 5.25 ಕೋಟಿ ಮಂದಿ ಮತದಾರರಿದ್ದರು. ಪರಿಷ್ಕರಣೆ ಬಳಿಕ ಮತದಾರರ ಸಂಖ್ಯೆ 5.09 ಕೋಟಿಗೆ ಇಳಿಕೆಯಾಗಿದೆ.

ಕರಡು ಮತದಾರರ ಪಟ್ಟಿಯ ಪ್ರಕಾರ ರಾಝ್ಯದಲ್ಲಿ ಒಟ್ಟು 5,09,01,662 ಮತದಾರರಿದ್ದಾರೆ. ಇದರಲ್ಲಿ 5.08,53,845 ಸಾಮಾನ್ಯ ಮತದಾರರಿದ್ದು, 46,817 ಸೇವಾ ಮತದಾರರಿದ್ದಾರೆ. ಸಾಮಾನ್ಯ ಮತದಾರರಲ್ಲಿ 2,56,39,736 ಪುರುಷರು, 2,52,09,619 ಮಹಿಳೆಯರು ಮತ್ತು 4,490 ಇತರೆ ಮತದಾರರಿದ್ದಾರೆ.

ವೋಟರ್ ಐಡಿಗೆ ಆಧಾರ್ ಜೋಡಣೆ ಕಡ್ಡಾಯವಲ್ಲ

ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಲ್ಲ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಮತದಾರರು ಗುರುತಿನ ಚೀಟಿಯ ಜೊತೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗುತ್ತಿದೆ. ಆಧಾರ್ ಜೋಡಣೆಗೆ 2023 ರ ಮಾರ್ಚ್ 31 ಕಡೆಯ ದಿನವಾಗಿದೆ. ರಾಝ್ಯದಲ್ಲಿ ಈವರೆಗೆ ಶೇ 68 ರಷ್ಟು ಆಧಾರ್ ಸಂಖ್ಯೆ ಜೋಡಣೆ ಪೂರ್ಣಗೊಂಡಿದೆ.