ರಷ್ಯಾದಿಂದ ಗೋವಾಕ್ಕೆ ಹೊರಟಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ ಕರೆ

ರಷ್ಯಾದಿಂದ ಗೋವಾಕ್ಕೆ ಹೊರಟಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ ಕರೆ

ಮಾಸ್ಕೋ: ರಷ್ಯಾದಿಂದ ಗೋವಾಕ್ಕೆ ಬರುತ್ತಿದ್ದ ಚಾರ್ಟರ್ಡ್ ವಿಮಾನಕ್ಕೆ ಭದ್ರತಾ ಎಚ್ಚರಿಕೆ ನೀಡಲಾಗಿದೆ. ನಂತರ ವಿಮಾನವನ್ನು ಉಜ್ಬೇಕಿಸ್ತಾನಕ್ಕೆ ತಿರುಗಿಸಲಾಗಿದೆ ಎನ್ನಲಾಗಿದೆ. ಅಲ್ಲಿನ ಸ್ಥಳೀಯ ಮಾಧ್ಯಮಗಳ ಪ ಮಾಹಿತಿಯ ಪ್ರಕಾರ, ವಿಮಾನದಲ್ಲಿ 2 ಮಕ್ಕಳು ಮತ್ತು 7 ಸಿಬ್ಬಂದಿ ಸೇರಿದಂತೆ ಒಟ್ಟು 238 ಜನರು ಇದ್ದಾರೆ.

ಈ ವಿಮಾನವನ್ನು ರಷ್ಯಾದ ಪೆರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಜುರೆ ಏರ್ಲೈನ್ಸ್ ವಿಮಾನದಲ್ಲಿ ಗೋವಾಕ್ಕೆ ಬರಲಾಗುತಿತ್ತು ಎನ್ನಲಾಗಿದೆ. ಬಾಂಬ್‌ ಕರೆ ಬಂದ ಹಿನ್ನಲೆಯಲ್ಲಿ, ವಿಮಾನವನ್ನು ಅವಸರದಲ್ಲಿ ಉಜ್ಬೇಕಿಸ್ತಾನಕ್ಕೆ ತಿರುಗಿಸಲಾಗಿದೆ ಎನ್ನಲಾಗಿದೆ.

'ದಬೋಲಿಮ್ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಮಧ್ಯರಾತ್ರಿ 12.30 ಕ್ಕೆ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಇಮೇಲ್ ಬಂದ ನಂತರ ವಿಮಾನವನ್ನು ಬೇರೆಡೆಗೆ ತಿರುಗಿಸಲಾಗಿದೆ' ಎಂದು ಅಧಿಕಾರಿ ತಿಳಿಸಿದ್ದಾರೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಮಾಸ್ಕೋದಿಂದ ಗೋವಾಕ್ಕೆ ತೆರಳುತ್ತಿದ್ದ ವಿಮಾನವು ಗುಜರಾತ್ನ ಜಾಮ್ನಗರ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಸುಮಾರು ಎರಡು ವಾರಗಳ ನಂತರ ಈ ಘಟನೆ ನಡೆದಿದೆ.