ಯಾವುದೇ ಕಾರಣಕ್ಕೂ ಡಿಕೆಶಿ ಬಿಜೆಪಿಗೆ ಬರೋದು ಬೇಡ್ವೇ ಬೇಡ: ಸಚಿವ ಅಶ್ವಥ ನಾರಾಯಣ್ ಆಕ್ರೋಶ

ಬೆಂಗಳೂರು: ನಮ್ಮ ಪಕ್ಷಕ್ಕೆ ಡಿ.ಕೆ.ಶಿವಕುಮಾರ್ ಬರೋದು ಬೇಡ. ಅವರ ನಡವಳಿಕೆ ಎಂತಹದ್ದು ಎಂದು ಎಲ್ಲರಿಗೂ ಗೊತ್ತಿದೆ. ಡಿಕೆಶಿ ಅಂತ ವ್ಯಕ್ತಿ ಬಿಜೆಪಿಗೆ ಬರೋದು ಬೇಡವೇ ಬೇಡ… ಎಂದು ಸಚಿವ ಡಾ.ಅಶ್ವಥ ನಾರಾಯಣ್ ಕಿಡಿಕಾರಿದರು.
ಬಿಜೆಪಿಗೆ ವಲಸೆ ಹೋದ ನಾಯಕರನ್ನು ಮತ್ತೆ ಕಾಂಗ್ರೆಸ್ಗೆ ಬರುವಂತೆ ಡಿಕೆಶಿ ಮುಕ್ತ ಆಹ್ವಾನ ನೀಡಿದ್ದರು. ಇದಕ್ಕೆ ಟಾಂಗ್ ಕೊಟ್ಟಿದ್ದ ಸಚಿವ ಮುನಿರತ್ನ, ನೀವೇ ಬಿಜೆಪಿಗೆ ಬನ್ನಿ ಎಂದು ಆಹ್ವಾನಿಸಿದ್ದರು. ಈ ಆಹ್ವಾನಕ್ಕೆ ವಿರೋಧ ವ್ಯಕ್ತಪಡಿಸಿದ ಅಶ್ವಥ ನಾರಾಯಣ್, ಯಾವುದೇ ಕಾರಣಕ್ಕೂ ಡಿಕೆಶಿ ಬಿಜೆಪಿಗೆ ಬರೋದು ಬೇಡ. ಅವರ ಬಗ್ಗೆ ಮಾತನಾಡಿದರೆ ನನ್ನ ಇಮೇಜ್ ಕಡಿಮೆ ಆಗುತ್ತದೆಯೇ ಹೊರತು ಮಾರ್ಕೆಟ್ ಬರಲ್ಲ ಎಂದು ಟೀಕಿಸಿದ್ದಾರೆ. ಪೈರಸಿಯನ್ನೇ ಜಸ್ಟಿಫೈ ಮಾಡಿಕೊಳ್ಳೋರು, ಇದನ್ನೂ ಜಸ್ಟಿಫೈ ಮಾಡಿಕೊಳ್ತಾರೆ. ಅವರು ಒಂದು ಪಕ್ಷದ ಅಧ್ಯಕ್ಷರು, ಆ ಪಕ್ಷವನ್ನ ಮುನ್ನೆಡೆಸಿಕೊಂಡು ಅಲ್ಲಿಯೇ ಬೆಳೆಯಲಿ ಎಂದು ಮಾತಿನಲ್ಲೇ ತಿವಿದಿದ್ದಾರೆ.