ಮೋದಿಯನ್ನು ಠಾಕ್ರೆ ರಕ್ಷಿಸದೇ ಹೋಗಿದ್ದರೆ ಇಂದು ಪ್ರಧಾನಿ ಆಗುತ್ತಿರಲಿಲ್ಲ: ಉದ್ಧವ್

ಮುಂಬೈ (ಪಿಟಿಐ): 'ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರಿಗೆ ರಾಜಧರ್ಮ ಪಾಲಿಸುವಂತೆ ಆಗಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸೂಚಿಸಿದ್ದರು. ಆಗ ಬಾಳಾಸಾಹೇಬ್ ಠಾಕ್ರೆ ಅವರು ಮೋದಿಯನ್ನು ರಕ್ಷಿಸಿದ್ದರು.
ಒಂದೊಮ್ಮೆ ಅವರು ರಕ್ಷಣೆ ಮಾಡದೆ ಹೋಗಿದ್ದರೆ ಮೋದಿ ಅವರು ಇಂದು ಈ ಹಂತಕ್ಕೆ ಬೆಳೆಯುತ್ತಿರಲಿಲ್ಲ.
ಕಾರ್ಯಕ್ರಮವೊಂದರಲ್ಲಿ ಭಾನುವಾರ ಮಾತನಾಡಿರುವ ಅವರು, 'ಬಿಜೆಪಿಯದ್ದು ನಿಜವಾದ ಹಿಂದುತ್ವ ಅಲ್ಲ. ಪರಸ್ಪರ ದ್ವೇಷಿಸುವುದಕ್ಕೆ ಹಿಂದುತ್ವ ಎಂದು ಹೇಳುವುದಿಲ್ಲ. ನಾನು ಬಿಜೆಪಿಯಿಂದ ದೂರ ಉಳಿದಿದ್ದೇನೆ. ಆದರೆ ಹಿಂದುತ್ವ ಕೈಬಿಟ್ಟಿಲ್ಲ. ಶಿವಸೇನಾ, ಅಕಾಲಿದಳವು ಎನ್ಡಿಎ ಭಾಗವಾಗಿರುವುದು ಬಿಜೆಪಿಗೆ ಇಷ್ಟವಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ