ಮೊದಲ ದಿನದ ಗಳಿಕೆ: ಕೆಜಿಎಫ್-2 ದಾಖಲೆ ದಾಖಲೆ ಮುರಿದ ಪಠಾಣ್

ಮೊದಲ ದಿನದ ಗಳಿಕೆ: ಕೆಜಿಎಫ್-2 ದಾಖಲೆ ದಾಖಲೆ ಮುರಿದ ಪಠಾಣ್

ಹಿಷ್ಕಾರ, ಕೇಸರಿ ಬಿಕಿನಿ ಸೇರಿದಂತೆ ವಿವಾದಗಳ ನಡುವೆ ಬಿಡುಗಡೆಯಾದ ಶಾರೂಖ್ ಖಾನ್ ಅಭಿನಯದ ಪಠಾಣ್ ಚಿತ್ರ ಭರ್ಜರಿ ಓಪನಿಂದ ಪಡೆದಿದ್ದು, ಮೊದಲ ದಿನದ ಗಳಿಕೆಯಲ್ಲಿ ಕೆಜಿಎಫ್-2 ದಾಖಲೆಯನ್ನು ಮುರಿದಿದೆ.

ಶಾರೂಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ನಟಿಸಿರುವ ಪಠಾಣ್ ಚಿತ್ರ ಈಗಾಗಲೇ ಮುಂಖಡ ಬುಕ್ಕಿಂಗ್ ನಲ್ಲಿ ದಾಖಲೆ ಬರೆದಿತ್ತು.

ಚಿತ್ರ ಬಿಡುಗಡೆಗೆ ಮುನ್ನವೇ 5 ಲಕ್ಷ ಟಿಕೆಟ್ ಮಾರಾಟವಾಗಿತ್ತು.

ಇದೀಗ 100 ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಿರುವ ಪಠಾಣ್ ಚಿತ್ರ ಮೊದಲ ದಿನವೇ 70ರಿಂದ 80 ಕೋಟಿ ರೂ. ಸಂಗ್ರಹಿಸಿದೆ. ಹಿಂದಿ ಭಾಷೆಯೊಂದರಲ್ಲೇ ಮೊದಲ ದಿನವೇ 50 ಕೋಟಿ ಬಾಚಿಕೊಂಡು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.

2019ರಲ್ಲಿ ಹೃತಿಕ್ ರೋಷನ್ ಅಭಿನಯದ ವಾರ್ ಚಿತ್ರದ ಭರ್ಜರಿ ಆರಂಭದ ದಾಖಲೆಯನ್ನು ಮುರಿದಿದೆ. ವಾರ್ ಚಿತ್ರ ಮೊದಲ ದಿನವೇ 50 ಕೋಟಿ ಸಂಗ್ರಹಿಸಿದ್ದರೆ, ಯಶ್ ಅಭಿನಯದ ಕೆಜಿಎಫ್-2 ಚಿತ್ರ ಗಳಿಸಿದ್ದ 52 ಕೋಟಿ ರೂ. ದಾಖಲೆಯನ್ನು ಮುರಿದಿದೆ.

ಚಿತ್ರದಲ್ಲಿ ಶಾರೂಖ್ ಖಾನ್ ಪಠಾಣ್ ಆಗಿ ಮತ್ತು ಸಲ್ಮಾನ್ ಖಾನ್ ಟೈಗರ್ ಆಗಿ ಒಂದೇ ದೃಶ್ಯದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಹೈಲೆಟ್ ಗಳಲ್ಲಿ ಒಂದಾಗಿದೆ.