ಮೀಸಲಾತಿ ಘೋಷಣೆಯಾಗಿದ್ದು ಮಕ್ಕಳ ಆಟಿಕೆಯಂತೆ ಆಗಿದೆ: ಹೆಚ್.ಡಿ ಕುಮಾರಸ್ವಾಮಿ

ಮೀಸಲಾತಿ ಘೋಷಣೆಯಾಗಿದ್ದು ಮಕ್ಕಳ ಆಟಿಕೆಯಂತೆ ಆಗಿದೆ: ಹೆಚ್.ಡಿ ಕುಮಾರಸ್ವಾಮಿ

ಮೈಸೂರು: ಮೈಸೂರಿನಲ್ಲಿ ಜೆಡಿಎಸ್‌ ಪಂಚರತ್ನ ಯಾತ್ರೆ ಯಶಸ್ವಿ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಮೀಸಲಾತಿ ವಿಚಾರವಾಗಿ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮೀಸಲಾತಿ ಘೋಷಣೆ ಆಗಿದ್ದು ಮಕ್ಕಳ ಆಟಿಕೆಯಂತೆ ಆಗಿದೆ. ರಾಜ್ಯ ಸರ್ಕಾರ ಯಾವ ಆಧಾರದಲ್ಲಿ ಮೀಸಲಾತಿ ಘೋಷಣೆ ಮಾಡಿದೆ ಅಂತಾ ತಿಳಿಯುತ್ತಿಲ್ಲ.ಮೀಸಲಾತಿ ಘೋಷಣೆಗೆ ಮುನ್ನ ವೈಜ್ಞಾನಿಕವಾಗಿ ಅಧ್ಯಯನ ಮಾಡಿದ್ದೀರಾ? ಯಾರ ಸಲಹೆ ಪಡೆದು ಮೀಸಲಾತಿ ಘೋಷಣೆ ಮಾಡಿದ್ದೀರಾ? ಎಂದು ಮೀಸಲಾತಿ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ್‌ ಸಮಾವೇಶಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಮುಂದಿನ ಏ.10ರವೆಗೂ ಪಂಚರತ್ನ ಯಾತ್ರೆ ಮುಂದುವರೆಯಲಿದೆ.ಬೆಂಗಳೂರು ನಗರದ ಕ್ಷೇತ್ರದಲ್ಲಿ ನಾಳೆಯಿಂದ ರಥಯಾತ್ರೆ ನಡೆಯಲಿದೆ. 6ರಂದು ಮೈಸೂರಿನ ಪಿರಿಯಾಪಟ್ಟಣ, 7 ರಂದು ಕೆಆರ್ ನಗರ ನಂತರ ಕೊಳ್ಳೇಗಾಲ ಹನೂರು ಗುಂಡ್ಲುಪೇಟೆ ಕ್ಷೇತ್ರದಲ್ಲಿ ರಥಯಾತ್ರೆ ನಡೆಸುತ್ತೇವೆ. ಸರ್ಕಾರದ ಸಾಧನೆ ಬಣ್ಣ ಬಣ್ಣದ ಜಾಹೀರಾತಿಗೆ ಸೀಮಿತವಾಗಿದೆ. ಉತ್ತರ ಕರ್ನಾಟಕ ಸಿಎಂ ಕ್ಷೇತ್ರದ ಬಡತನದ ಬಗ್ಗೆ ಕೇಂದ್ರ ವರದಿ ಮಾಡಿದೆ ಎಂದರು.