ಮತದಾರರ ಸೆಳೆಯೋದಕ್ಕೆ ʻಶಾಸಕ ಟಿ.ಡಿ ರಾಜೇಗೌಡ ಕುಕ್ಕರ್‌ ಗಿಫ್ಟ್‌ʼ : ತರಕಾರಿ ಬೇಯಿಸುವಾಗ ʼಸ್ಪೋಟʼ, ತಪ್ಪಿದ ಅನಾಹುತ

ಮತದಾರರ ಸೆಳೆಯೋದಕ್ಕೆ ʻಶಾಸಕ ಟಿ.ಡಿ ರಾಜೇಗೌಡ ಕುಕ್ಕರ್‌ ಗಿಫ್ಟ್‌ʼ : ತರಕಾರಿ ಬೇಯಿಸುವಾಗ ʼಸ್ಪೋಟʼ, ತಪ್ಪಿದ ಅನಾಹುತ

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದಲ್ಲಿ ಮತದಾರರ ಸೆಳೆಯೋದಕ್ಕೆ ಶಾಸಕ ಟಿ.ಡಿ ರಾಜೇಗೌಡ ನೀಡಿದ ಕುಕ್ಕರ್‌ ಸ್ಪೋಟಗೊಂಡ ಘಟನೆ ಬೆಳಕಿಗೆಬಂದಿದೆ.

ವಿಧಾನ ಸಭೆ ಚುನಾವಣೆಗೆ ಮತದಾರರ ಸೆಳೆಯೋದಕ್ಕೆ ಶಾಸಕ ಟಿ.ಡಿ ರಾಜೇಗೌಡ ನೀಡಿದ ಕುಕ್ಕರ್‌ ಗಳನ್ನು ಮನೆ ಮನೆಗೆ ಹಂಚಲಾಗಿತ್ತು.

ಗಿಫ್ಟ್‌ ನೀಡಿದ ಕುಕ್ಕರ್‌ನಲ್ಲಿ ತರಕಾರಿ ಬೇಯಿಸಲು ಇಟ್ಟಾಗ ಇದ್ದಕ್ಕಿಂದತೆ ಸ್ಪೋಟಗೊಂಡು ಭಾರೀ ಅನಾಹುತವೊಂದು ತಪ್ಪಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ದೇವರಾಜ್‌ನ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ತರಕಾರಿ ಬೇಯಿಸಲು ಇಟ್ಟು ಮನೆಯಿಂದ ಹೊರಗೆ ಕುಳಿತಿದ್ದಾಗ ಈ ದುರ್ಘಟನೆ ನಡೆಸಿದ್ದರಿಂದ ಭಾರೀ ಅನಾಹುತ ತಪ್ಪಿದೆ ಎಂದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಮೈಸೂರಲ್ಲಿ ನೀತಿ ಸಂಹಿತೆ ಜಾರಿ, ʼಶಸ್ತ್ರಾಸ್ತ್ರ ಬಳಕೆಗೆ ವಿನಾಯ್ತಿʼ ನೀಡುವಂತೆ ಪರವಾನಿಗೆದಾರರ ಮನವಿ

ಮೈಸೂರು : ಕರ್ನಾಟಕ ವಿಧಾನ ಸಭೆ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಶಸ್ತ್ರಾಸ್ತ್ರ ಬಳಕೆಗೆ ವಿನಾಯ್ತಿ ನೀಡುವಂತೆ ಮೈಸೂರು ಪೊಲೀಸ್ ಕಮಿಷನರ್​ ರಮೇಶ್ ಬಾನೋತ್​ ಪರವಾನಿಗೆದಾರರ ಮನವಿ ಸಲ್ಲಿಸಿದ್ದಾರೆ.

ವಿಧಾನ ಸಭೆ ಚುನಾವಣೆ ಡೇಟ್‌ ಫಿಕ್ಸ್‌ ಆದ ಬೆನ್ನಲ್ಲೆ ಕರ್ನಾಟಕದಲ್ಲಿ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಈ ಬೆನ್ನಲ್ಲೆ ಚುನಾವಣೆ ಮುಗಿಯುವವರೆಗೆ ಮೈಸೂರು ಜಿಲ್ಲೆಯಾದ್ಯಂತ ಶಸ್ತ್ರಾಸ್ತ್ರ, ಆಯುಧ ಮತ್ತು ಮದ್ದುಗುಂಡುಗಳೊಂದಿಗೆ ಸಂಚಾರ ಹಾಗೂ ಅವುಗಳನ್ನು ಬಳಕೆಯನ್ನು ನಿಷೇಧಿಸಿದ್ದು, ಪರವಾನಿಗೆದಾರರು ವಿನಾಯಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಚುನವಣಾ ಪ್ರಚಾರ, ಚುನಾವಣಾ ಟಿಕೆಟ್‌ ಬಗ್ಗೆ ಭಾರೀ ಫೈಟ್‌ ನಡೆಯುತ್ತಿದೆ. ಭದ್ರತಾ ದೃಷ್ಟಿಯಿಂದಾಗಿ ರಾಜಕಾರಣಿಗಳು, ಬ್ಯಾಂಕ್ ಮ್ಯಾನೇಜರ್​​, ಉದ್ಯಮಿಗಳು ಆತ್ಮರಕ್ಷಣೆ, ವ್ಯಾಪಾರ ವಹಿವಾಟು ದೃಷ್ಟಿಯಿಂದ ಪಿಸ್ತೂಲ್​, ರಿವಾಲ್ವರ್​​​, ಬಂದೂಕನ್ನು ಇಟ್ಟುಕೊಳ್ಳಲು ವಿನಾಯಿತಿ ನೀಡಿ ಎಂದು42 ಪರವಾನಿಗೆದಾರರ ಮನವಿ ಮಾಡಿದ್ದಾರೆ. ಈಗಾಗಲೇ ಮೈಸೂರು ಪೊಲೀಸ್ ಕಮಿಷನರ್​ ರಮೇಶ್ ಬಾನೋತ್​ ಅವರಿಗೆ ಮೈಸೂರಿನ ದೇವರಾಜ ವಿಭಾಗದಿಂದ 13, ಕೃಷ್ಣರಾಜ ವಿಭಾಗದಿಂದ 8, ನರಸಿಂಹರಾಜ ವಿಭಾಗದಿಂದ 13, ವಿಜಯನಗರ ವಿಭಾಗದಿಂದ 8 ಜನರು ಸೇರಿ ಒಟ್ಟು 42 ಜನರು ಪತ್ರ ಬಂದಿದೆ ಎಂದು ವರದಿಯಾಗಿದೆ.