ಭಾರೀ ಸರಕುಗಳು, ಪ್ರಯಾಣಿಕ ವಾಹನಗಳ ಕಡ್ಡಾಯ 'ಫಿಟ್ ನೆಸ್ 'ಪರೀಕ್ಷೆ ದಿನಾಂಕ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ
ನವದೆಹಲಿ: ಭಾರೀ ಸರಕುಗಳು ಮತ್ತು ಪ್ರಯಾಣಿಕ ಮೋಟಾರು ವಾಹನಗಳಿಗೆ ಕಡ್ಡಾಯ ಫಿಟ್‌ನೆಸ್ ಪರೀಕ್ಷೆಯ ದಿನಾಂಕವನ್ನು ಕೇಂದ್ರವು 18 ತಿಂಗಳವರೆಗೆ ಅಂದರೆ ಅಕ್ಟೋಬರ್ 1, 2024ರವೆರೆಗೆ ವಿಸ್ತರಣೆ ಮಾಡಿ ಆದೇಶಿಸಿದೆ.
ದೇಶಾದ್ಯಂತ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳ (ಎಟಿಎಸ್) ಸನ್ನದ್ಧತೆಯ ಪ್ರಸ್ತುತ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರೀ ಸರಕು ವಾಹನಗಳು/ಹೆವಿ ಪ್ಯಾಸೆಂಜರ್ ಮೋಟಾರು ವಾಹನಗಳು, ಮಧ್ಯಮ ಸರಕುಗಳ ವಾಹನಗಳು/ಮಧ್ಯಮ ಪ್ರಯಾಣಿಕ ಮೋಟಾರು ವಾಹನಗಳು ಮತ್ತು ಲಘು ಮೋಟಾರು ವಾಹನಗಳು (ಸಾರಿಗೆ) ಸಂಬಂಧಿಸಿದಂತೆ ATS ಮೂಲಕ ಕಡ್ಡಾಯ ಪರೀಕ್ಷೆಯ ದಿನಾಂಕವನ್ನು 2024 ರ ಅಕ್ಟೋಬರ್ 1 ರವರೆಗೆ ವಿಸ್ತರಿಸಲು MoRTH ನಿರ್ಧರಿಸಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ವಾಹನದ ಫಿಟ್‌ನೆಸ್ ಅನ್ನು ಪರಿಶೀಲಿಸಲು ಅಗತ್ಯವಿರುವ ವಿವಿಧ ಪರೀಕ್ಷೆಗಳನ್ನು ಸ್ವಯಂಚಾಲಿತ ಗೊಳಿಸಲು ATS ಯಾಂತ್ರಿಕ ಸಾಧನಗಳನ್ನು ಬಳಸುತ್ತದೆ. ಈ ಮೊದಲು ಎಟಿಎಸ್ ಮೂಲಕ ಭಾರೀ ಸರಕು ವಾಹನಗಳು ಮತ್ತು ಭಾರೀ ಪ್ರಯಾಣಿಕ ಮೋಟಾರು ವಾಹನಗಳಿಗೆ ಫಿಟ್‌ನೆಸ್ ಪರೀಕ್ಷೆಯನ್ನು ಏಪ್ರಿಲ್ 1, 2023 ರಿಂದ ಕಡ್ಡಾಯಗೊಳಿಸಲಾಗುವುದು ಎಂದು ಸಚಿವಾಲಯ ತಿಳಿಸಿತ್ತು.
ಇದರ ನಡುವೆ ಮಧ್ಯಮ ಸರಕು ವಾಹನಗಳು, ಮಧ್ಯಮ ಪ್ರಯಾಣಿಕ ಮೋಟಾರು ವಾಹನಗಳು ಮತ್ತು ಲಘು ಮೋಟಾರು ವಾಹನಗಳು (ಸಾರಿಗೆ) 1 ಜೂನ್ 2024 ರಿಂದ ಅಗತ್ಯವನ್ನು ಕಡ್ಡಾಯ ಗೊಳಿಸಲಾಗುವುದು ಎಂದು ಸಚಿವಾಲಯ ಮಾಹಿತಿ ನೀಡಿದೆ.
ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 175 ರ ಪ್ರಕಾರ ನೋಂದಾಯಿಸಲಾದ ಸ್ವಯಂಚಾಲಿತ ಪರೀಕ್ಷಾ ಕೇಂದ್ರದ ಮೂಲಕ ಮಾತ್ರ ಮೋಟಾರು ವಾಹನಗಳ ಕಡ್ಡಾಯ ಫಿಟ್‌ನೆಸ್ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಏಪ್ರಿಲ್ 5, 2022 ರಂದು ಅಧಿಸೂಚನೆಯನ್ನು ಹೊರಡಿಸಿದೆ.
ವಿಶೇಷ ಉದ್ದೇಶದ ವಾಹನಗಳು, ರಾಜ್ಯ ಸರ್ಕಾರಗಳು, ಕಂಪನಿಗಳು, ಸಂಘಗಳು ಮತ್ತು ವ್ಯಕ್ತಿಗಳ ಸಂಸ್ಥೆಗಳಂತಹ ಘಟಕಗಳು ವೈಯಕ್ತಿಕ ಮತ್ತು ಸಾರಿಗೆ ವಾಹನಗಳ ಫಿಟ್‌ನೆಸ್ ಅನ್ನು ಪರೀಕ್ಷಿಸಲು ATS ತೆರೆಯಲು ಅನುಮತಿಸಬಹುದು ಎಂದು ಸಚಿವಾಲಯ ಹೇಳಿದೆ.