ಬೆಳ್ಳಂಬೆಳಗ್ಗೆ ಚಿತ್ರದುರ್ಗದಲ್ಲಿ ಚಿರತೆ ಪ್ರತ್ಯಕ್ಷ : ಆಲಘಟ್ಟ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಳ

ಬೆಳ್ಳಂಬೆಳಗ್ಗೆ ಚಿತ್ರದುರ್ಗದಲ್ಲಿ ಚಿರತೆ ಪ್ರತ್ಯಕ್ಷ : ಆಲಘಟ್ಟ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಳ

ಚಿತ್ರದುರ್ಗ: ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಳ ಸೃಷ್ಟಿಯಾಗಿದ್ದು ಮನೆಯಿಂದ ಆಚೆ ಬರೋದಕ್ಕೂ ಭಯಭೀತರಾಗಿದ್ದಾರೆ.ಗ್ರಾಮದಲ್ಲಿ ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿರೋದ್ರಿಂದ ಸ್ಥಳೀಯ ಜನರು ಹೊಲ ಮತ್ತು ಗದ್ದೆಗಳಿಗೆ ಹೋಗದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ. ತದ ನಂತರ ಚಿರತೆ ಸೆರೆ ಹಿಡಿಯೋದಕ್ಕೆ ಗ್ರಾಮದ ಹೊರವಲಯದಲ್ಲಿಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ, ಗುಡ್ಡದ ಬಳಿ ಚಿರತೆ ಸೆರೆಗಾಗಿ ಬೋನ್‌ ಇಡಲಾಗಿದೆ. ಬೋನಿಗೆ ಬೀಳದ ಚಿರತೆ ಪದೇ ಪದೇ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು,ಭಯದ ವಾತಾವರಣದಲ್ಲೇ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.