ಬೆಳಗಾವಿ ಸವದತ್ತಿ ರೇಣುಕಾ ಯಲ್ಲಮ್ಮ ದರ್ಶನಕ್ಕೆ ಹೋಗಲು ಭಕ್ತರ ಪರದಾಟ; ಬಸ್‌ ಇಲ್ಲದಿದ್ದಕ್ಕೆ ಸಾರಿಗೆ ಅಧಿಕಾರಿ ವಿರುದ್ಧ ಆಕ್ರೋಶ

ಬೆಳಗಾವಿ ಸವದತ್ತಿ ರೇಣುಕಾ ಯಲ್ಲಮ್ಮ ದರ್ಶನಕ್ಕೆ ಹೋಗಲು ಭಕ್ತರ ಪರದಾಟ; ಬಸ್‌ ಇಲ್ಲದಿದ್ದಕ್ಕೆ ಸಾರಿಗೆ ಅಧಿಕಾರಿ ವಿರುದ್ಧ ಆಕ್ರೋಶ

ದಗ: ಪ್ರಸಿದ್ದ ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಬೆಳಗ್ಗೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

ಮಲಪ್ರಭೆಯ ತಟ ಗುಡ್ಡದ ಮೇಲೆ ನೆಲಿಸಿರುವ ದೇವಿಯ ದರ್ಶನ ಪಡೆದುಕೊಳ್ಳಲು ರಾಜ್ಯ-ಅಂತರ್ ರಾಜ್ಯದಿಂದ ಜನರು ಬರುತ್ತಿದ್ದಾರೆ.

ಆದರೆ ಗದಗ ಜಿಲ್ಲೆಯ ಜನ ಮಾತ್ರ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಲು ಪರದಾಡುತ್ತಿದ್ದಾರೆ. ಗದಗ ನಗರದ ಹೊಸ ಬಸ್ ನಿಲ್ದಾಣದಿಂದ ಸವದತ್ತಿಗೆ ಹೋಗಲು ಬಸ್ ಇಲ್ಲದೆ ಭಕ್ತರು ಪರದಾಡುತ್ತಿದ್ದಾರೆ.

ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ಕೇಳಿದರೆ ಉಢಾಪೆ ಉತ್ತರ ನೀಡುತ್ತಿದ್ದಾರೆ. ಇದರಿಂದ ಭಕ್ತರು ಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಕುಂಡಿ ಉತ್ಸವಕ್ಕೆ ವಾಹನ ಬಿಟ್ಟಿದ್ದೇವೆ ಸವದತ್ತಿಗೆ ಬಸ್ ಬಿಡಲಿಕ್ಕಾಗಲ್ಲ ಅಂತಿದ್ದಾರೆ. ಹೀಗಾಗಿ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಹೋಗುವ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರು, ಮಕ್ಕಳು ಸೇರಿ ನೂರಾರು ಭಕ್ತರು ಪರದಾಡುತ್ತಿದ್ದು, ಅಧಿಕಾರಿಗಳು ಬಸ್ ವ್ಯವಸ್ಥೆ ಮಾಡಬೇಕು ಅಂತ ಭಕ್ತರು ಒತ್ತಾಯಿಸಿದ್ದಾರೆ.